ADVERTISEMENT

ಕಾನ್ಪುರ ಮೆಟ್ರೊ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2021, 12:29 IST
Last Updated 28 ಡಿಸೆಂಬರ್ 2021, 12:29 IST
ಕಾನ್ಪುರದಲ್ಲಿ ಮಂಗಳವಾರ ಮೆಟ್ರೊ ರೈಲು ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಜನರತ್ತ ಕೈಬೀಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿಚಿತ್ರದಲ್ಲಿದ್ದಾರೆ –ಪಿಟಿಐ ಚಿತ್ರ
ಕಾನ್ಪುರದಲ್ಲಿ ಮಂಗಳವಾರ ಮೆಟ್ರೊ ರೈಲು ಪ್ರಯಾಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಜನರತ್ತ ಕೈಬೀಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿಚಿತ್ರದಲ್ಲಿದ್ದಾರೆ –ಪಿಟಿಐ ಚಿತ್ರ   

ಕಾನ್ಪುರ: ಕಾನ್ಪುರದಲ್ಲಿನ ಮೆಟ್ರೊ ರೈಲು ಯೋಜನೆಯ ಪೂರ್ಣಗೊಂಡ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು.

ಮಂಗಳವಾರ ಬೆಳಿಗ್ಗೆ ಕಾನ್ಪುರಕ್ಕೆ ಆಗಮಿಸಿದ ಪ್ರಧಾನಿ ಅವರು, ಐಐಟಿ ಕಾನ್ಪುರದಿಂದ ಮೋತಿ ಜೀಲ್‌ವರೆಗಿನ ಒಟ್ಟು 9 ಕಿ.ಮೀ. ಉದ್ದದ ಪೂರ್ಣಗೊಂಡ ಮಾರ್ಗವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಅವರು ಐಐಟಿ ಮೆಟ್ರೊ ನಿಲ್ದಾಣದಿಂದ ಗೀತಾ ನಗರಕ್ಕೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದರು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಜತೆಯಲ್ಲಿದ್ದರು.

‘ನಗರದ ಸಂರ್ಪಕ ಯೋಜನೆಯು ಪ್ರಧಾನಿ ಅವರ ಆದ್ಯತಾ ಕ್ಷೇತ್ರಗಳಲ್ಲಿ ಒಂದಾಗಿದ್ದು, ಕಾನ್ಪುರ ಮೆಟ್ರೊ ಯೋಜನೆಯು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಮೆಟ್ರೊ ರೈಲು ಯೋಜನೆಯ ಸಂಪೂರ್ಣ ಉದ್ದ 32 ಕಿ.ಮೀ. ಆಗಿದ್ದು ಇದನ್ನು ₹ 11,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.