ADVERTISEMENT

ಪ್ರಧಾನಿ ತಪ್ಪು ಒಪ್ಪಿಕೊಂಡು, ತಜ್ಞರ ಸಹಾಯ ಪಡೆಯಬೇಕು: ರಾಹುಲ್‌ ಗಾಂಧಿ

ಪಿಟಿಐ
Published 17 ಜೂನ್ 2021, 10:26 IST
Last Updated 17 ಜೂನ್ 2021, 10:26 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ತಜ್ಞರ ಸಹಾಯವನ್ನು ಪಡೆಯಬೇಕು. ಹಾಗಿದ್ದಲ್ಲಿ ಮಾತ್ರ ಭಾರತವನ್ನು ಕಟ್ಟಲು ಸಾಧ್ಯ. ತಮ್ಮ ತಪ್ಪುಗಳನ್ನು ನಿರಾಕರಿಸುವುದರಿಂದ ಏನೂ ಪರಿಹಾರ ಸಿಗುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಗುರುವಾರ ಹೇಳಿದ್ದಾರೆ.

ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಜಾಗತಿಕವಾಗಿ ಬಡತನ ಹೆಚ್ಚಾಗಿದ್ದು, ಇದರಲ್ಲಿ ಭಾರತ ಶೇಕಡ 57.3 ರಷ್ಟು ಪಾಲನ್ನು ಹೊಂದಿದೆ ಎಂದು ಉಲ್ಲೇಖಿಸಿರುವ ವಿಶ್ವಬ್ಯಾಂಕ್‌ನ ವರದಿಯೊಂದನ್ನು ರಾಹುಲ್‌ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಕೋವಿಡ್ ನಿರ್ವಹಣೆಯಲ್ಲಿ ಭಾರತ ಸರ್ಕಾರ ಎಡವಿದೆ. ಇದು ಅದರದ್ದೇ ಫಲಿತಾಂಶ. ಆದರೆ ನಾವು ಈಗ ಭವಿಷ್ಯದ ಮೇಲೆ ಗಮನಹರಿಸಬೇಕು. ಪ್ರಧಾನಿ ಅವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡು, ಸಾಂಕ್ರಾಮಿಕ ನಿರ್ವಹಣೆಗೆ ತಜ್ಞರ ಸಹಾಯವನ್ನು ಪಡೆಯಬೇಕು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.