ADVERTISEMENT

ಚಾಲಕರಹಿತ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ನಾಳೆ ಚಾಲನೆ

ಪಿಟಿಐ
Published 27 ಡಿಸೆಂಬರ್ 2020, 14:43 IST
Last Updated 27 ಡಿಸೆಂಬರ್ 2020, 14:43 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ದೇಶದ ಮೊದಲ ಚಾಲಕರಹಿತ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಡಿ.28) ಚಾಲನೆ ನೀಡುವರು.ದೆಹಲಿ ಮೆಟ್ರೊದ ಮೆಜೆಂಟಾ ಲೈನ್‌ನಲ್ಲಿ (ಕೆನ್ನೇರಳೆ ಮಾರ್ಗ) ಈ ರೈಲು ಸಂಚರಿಸುತ್ತದೆ.

ಜನಕ್‌ಪುರಿ ಪಶ್ಚಿಮ–ಬಟಾನಿಕಲ್‌ ಗಾರ್ಡನ್‌ ನಡುವೆ ಸಂಚರಿಸುವ ಈ ಚಾಲಕರಹಿತ ರೈಲಿಗೆ ಬೆಳಿಗ್ಗೆ 11ಕ್ಕೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸುವರು. ಏರ್‌ಪೋರ್ಟ್‌ ಎಕ್ಸ್‌ಪ್ರೆಸ್‌ ಮಾರ್ಗದಲ್ಲಿ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಸೇವೆಗೂ ಇದೇ ಸಂದರ್ಭದಲ್ಲಿ ಚಾಲನೆ ನೀಡುತ್ತಾರೆ ಎಂದು ದೆಹಲಿ ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಹೇಳಿದ್ದಾರೆ.

‘37 ಕಿ.ಮೀ ಉದ್ದದ ಮೆಜೆಂಟಾ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚಾರ ಆರಂಭಿಸಿದ ನಂತರ, ಚಾಲಕನಿಲ್ಲದೇ ಸಂಚರಿಸುವ ರೈಲು ಮಾರ್ಗಗಳನ್ನು ಹೊಂದಿರುವ ಸಂಸ್ಥೆಗಳ ಸಾಲಿಗೆ ದೆಹಲಿ ಮೆಟ್ರೊ ಸಹ ಸೇರಿದಂತಾಗಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಮಜ್ಲಿಸ್‌ ಪಾರ್ಕ್‌ ಮತ್ತು ಶಿವ ವಿಹಾರ್ ನಡುವಿನ 57 ಕಿ.ಮೀ ಮಾರ್ಗದಲ್ಲಿ (ಗುಲಾಬಿ ಮಾರ್ಗ) 2021ರ ಮಧ್ಯದಲ್ಲಿ ಚಾಲಕರಹಿತ ರೈಲು ಸಂಚಾರ ಆರಂಭಿಸಲಾಗುವುದು’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.