ADVERTISEMENT

ಕೋವಿಡ್‌ ಯೋಧರಿಗಾಗಿ ಕೌಶಲಾಭಿವೃದ್ಧಿ ತರಬೇತಿ: ಜೂ.18ರಂದು ಪ್ರಧಾನಿಯಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 11:17 IST
Last Updated 16 ಜೂನ್ 2021, 11:17 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ (ಪಿಟಿಐ): ಕೋವಿಡ್ ಮುಂಚೂಣಿ ಕಾರ್ಯಕರ್ತರ ಕೌಶಲ ಹೆಚ್ಚಿಸಲು ಕಸ್ಟಮೈಸ್ಡ್ ಕ್ರ್ಯಾಶ್ ಕೋರ್ಸ್ (ಪ್ರಸಕ್ತ ಸನ್ನಿವೇಶಕ್ಕೆ ರೂಪಿಸಿರುವ) ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 18ರಂದು (ಶುಕ್ರವಾರ) ಚಾಲನೆ ನೀಡಲಿದ್ದಾರೆ.

ಅಂದು ಬೆಳಿಗ್ಗೆ 11 ಗಂಟೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮವನ್ನು ಪ್ರಧಾನಿ ಉದ್ಘಾಟಿಸಲಿದ್ದು, ದೇಶದ 26 ಜಿಲ್ಲೆಗಳ 111 ತರಬೇತಿ ಕೇಂದ್ರಗಳಲ್ಲಿ ಇದು ಆರಂಭವಾಗಲಿದೆ.

ದೇಶದಾದ್ಯಂತ ಒಂದು ಲಕ್ಷ ಕೋವಿಡ್ ಯೋಧರ ಕೌಶಲ ಹೆಚ್ಚಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಸದ್ಯದ ಸನ್ನಿವೇಶ ಆಧರಿಸಿ ರೂಪಿಸಿರುವ ಹೋಮ್ ಕೇರ್ ಸಪೋರ್ಟ್, ಬೇಸಿಕ್ ಕೇರ್ ಸಪೋರ್ಟ್, ಅಡ್ವಾನ್ಸ್ಡ್ ಕೇರ್ ಸಪೋರ್ಟ್, ಎಮರ್ಜೆನ್ಸಿ ಕೇರ್ ಸಪೋರ್ಟ್, ಸ್ಯಾಂಪಲ್ ಕಲೆಕ್ಷನ್ ಸಪೋರ್ಟ್, ಮೆಡಿಕಲ್ ಎಕ್ವಿಪ್ಮೆಂಟ್ ಸಪೋರ್ಟ್ ಎಂಬ ಆರು ಕೋರ್ಸ್‌ಗಳಲ್ಲಿ ಕೋವಿಡ್ ಯೋಧರಿಗೆ ತರಬೇತಿ ನೀಡಲಾಗುತ್ತದೆ.

ADVERTISEMENT

ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆಯಡಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಇದು ₹276 ಕೋಟಿ ವೆಚ್ಚದ ಯೋಜನೆ. ಇದು ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸಲು ನುರಿತ ವೈದ್ಯಕಿಯೇತರ ಆರೋಗ್ಯ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಉದ್ದೇಶ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.