ADVERTISEMENT

ಪೋಲವರಂ ಯೋಜನೆ: ಕೇಂದ್ರಕ್ಕೆ ‘ಸುಪ್ರೀಂ’ ನೋಟಿಸ್‌

ಪಿಟಿಐ
Published 29 ಡಿಸೆಂಬರ್ 2022, 16:28 IST
Last Updated 29 ಡಿಸೆಂಬರ್ 2022, 16:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪೋಲವರಂ ಬಹು ಉದ್ದೇಶಿತ ನೀರಾವರಿ ಯೋಜನೆಗೆ ಅನುಮತಿ ನೀಡುವ ವೇಳೆ ಪರಿಸರ ಅನುಮತಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದುಪರಿಸರವಾದಿ ಪೆಂಟಪಾಟಿ ಪುಲ್ಲಾರಾವ್‌ ಸಲ್ಲಿಸಿದ್ದ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಗುರುವಾರ ನೋಟಿಸ್‌ ನೀಡಿದೆ.

ನ್ಯಾಯಮೂರ್ತಿಗಳಾದ ಸಂಜಯ್‌ ಖನ್ನಾ ಹಾಗೂ ಎಂ.ಎಂ ಸುಂದ್ರೇಶ್‌ ಅವರಿದ್ದ ಪೀಠವು2023 ಫೆಬ್ರುವರಿ ಒಳಗೆ ಕೇಂದ್ರ ಸರ್ಕಾರ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಒಡಿಶಾ ಸರ್ಕಾರಗಳಿಗೆ ಪ್ರತಿಕ್ರಿಯಿಸುವಂತೆ ನೋಟಿಸ್‌ ನೀಡಿದೆ.

‘ಪರಿಸರ ಹಾಗೂ ಅರಣ್ಯ ಸಚಿವಾಲಯಗಳ ಜಂಟಿ ಸಮಿತಿ, ಜಲ ಶಕ್ತಿ ಸಚಿವಾಲಯ, ಆಂಧ್ರ ಪ್ರದೇಶ ಜನಸಂಖ್ಯಾ ನಿಯಂತ್ರಣ ಮಂಡಳಿ ಹಾಗೂ ಪೊಳವರಂ ಯೋಜನಾ ಪ್ರಾಧಿಕಾರದ ವರದಿಗಳನ್ನು ಪರಿಗಣಿಸದೇ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಪ್ರಕರಣವನ್ನು ಸಮಾಪ್ತಿಗೊಳಿಸಿತು’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ADVERTISEMENT

‘ಯೋಜನೆಯಿಂದಾಗಿ ದೊಡ್ಡ ಪ್ರಮಾಣದ ಕಸದ ರಾಶಿಯು ಕೃಷಿಭೂಮಿಯಯಲ್ಲಿ ಜಮಾವಣೆಗೊಳ್ಳಲಿದೆ’ ಎಂದು ಪುಲ್ಲಾಲರಾವ್‌ ಅವರು ತಮ್ಮ ಅರ್ಜಿಯಲ್ಲಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.