ADVERTISEMENT

ಎಚ್ಚರಿಕೆ ಹೆಜ್ಜೆ ಅಗತ್ಯ: ರಾಜಕೀಯ ನಾಯಕರಿಗೆ ಧನಕರ್‌ ಕಿವಿಮಾತು

ಪಿಟಿಐ
Published 27 ಮೇ 2025, 16:15 IST
Last Updated 27 ಮೇ 2025, 16:15 IST
ಜಗದೀಪ ಧನಕರ್
ಜಗದೀಪ ಧನಕರ್   

ನವದೆಹಲಿ: ‘ರಾಷ್ಟ್ರೀಯತೆ ಮತ್ತು ದೇಶದ ಭದ್ರತೆ ವಿಚಾರವಾಗಿ ರಾಜಕೀಯದಲ್ಲಿ ಕಾವೇರಿದ  ಚರ್ಚೆ, ಪ್ರತಿಕ್ರಿಯೆಗಳು ಕಂಡುಬರುತ್ತಿವೆ. ಇಂತಹ ಸಂದರ್ಭದಲ್ಲಿ, ರಾಜಕೀಯ ಕ್ಷೇತ್ರದಲ್ಲಿರುವವರು ಚರ್ಚೆ–ವಾಗ್ದಾದಗಳನ್ನು ಮೀರಿ ಎಚ್ಚರಿಕೆ ಹೆಜ್ಜೆ ಇಡುವುದು ಅಗತ್ಯ’ ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಮಂಗಳವಾರ ಹೇಳಿದರು.

‘ಆಪರೇಷನ್‌ ಸಿಂಧೂರವು ನಮ್ಮ ಮನಃಸ್ಥಿತಿಯಲ್ಲಿ ಭಾರಿ ಬದಲಾವಣೆ ತಂದಿದೆ. ಭಾರತೀಯರು ಈಗ ಹಿಂದೆಂದಿಗಿಂತಲೂ ಹೆಚ್ಚು ರಾಷ್ಟ್ರೀಯವಾದಿಗಳಾಗಿದ್ದಾರೆ. ಆದರೆ, ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಪ್ರಗತಿಯಂತಹ ವಿಚಾರಗಳಿಗೆ ಸಂಬಂಧಿಸಿ ರಾಜಕೀಯ ಕ್ಷೇತ್ರದಲ್ಲಿರುವ ಪ್ರತಿಯೊಬ್ಬರೂ ಒಮ್ಮತ ತಳೆದು, ಒಟ್ಟಾಗಿ ಕೆಲಸ ಮಾಡುವುದು ಅಗತ್ಯ’ ಎಂದು ಪ್ರತಿಪಾದಿಸಿದ್ದಾರೆ.

ರಾಜ್ಯಸಭೆ ಕಾರ್ಯನಿರ್ವಹಣೆ ಕುರಿತು ಅಧ್ಯಯನ ನಡೆಸಲು ಇಂಟರ್ನ್‌ಶಿಪ್‌ಗಾಗಿ ಆಯ್ಕೆಯಾದವರನ್ನು ಉದ್ದೇಶಿಸಿ ಅವರು ಮಾತನಾಡಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.