ADVERTISEMENT

ಸುಳ್ಳುಪತ್ತೆ ಪರೀಕ್ಷೆ ವರದಿ ಕೂಡ ಸಾಕ್ಷ್ಯದ ವಸ್ತು : ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 16:10 IST
Last Updated 4 ಜೂನ್ 2023, 16:10 IST
-
-   

ನವದೆಹಲಿ: ಪ್ರಕರಣವೊಂದರಲ್ಲಿ ವ್ಯಕ್ತಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಲು ಆತನ ಮೇಲೆ ನಡೆಸುವ ಸುಳ್ಳು ಪತ್ತೆ ಪರೀಕ್ಷೆ, ಬ್ರೇನ್‌ ಮ್ಯಾಪಿಂಗ್ ಸೇರಿದಂತೆ ಮನೋವೈಜ್ಞಾನಿಕ ಪರೀಕ್ಷೆಗಳು ಸಾಕಾಗದಿರಬಹುದು. ಆದರೆ ಅವು ಕೂಡ ಸಾಕ್ಷ್ಯಕ್ಕೆ ಸಂಬಂಧಪಟ್ಟ ವಸ್ತುವಾಗಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಅಭಯ್‌ ಎಸ್‌.ಓಕಾ ಮತ್ತು ರಾಜೇಶ್ ಬಿಂದಲ್‌ ಅವರಿದ್ದ ನ್ಯಾಯಪೀಠ ಈ ಮಾತು ಹೇಳಿದೆ.

ಕೊಲೆ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌, ಸುಳ್ಳು ಪತ್ತೆ ಪರೀಕ್ಷೆ, ಬ್ರೇನ್‌ ಮ್ಯಾಪಿಂಗ್‌ನ ವರದಿಗಳನ್ನು ತಿರಸ್ಕರಿಸಿ, ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶಿಸಿತ್ತು.

ADVERTISEMENT

ಬಾಂಬೆ ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಹೈಕೋರ್ಟ್‌ ಆದೇಶವನ್ನು ರದ್ದುಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.