ADVERTISEMENT

ವಿದ್ಯುತ್‌ ವಲಯದ ಖಾಸಗೀಕರಣಕ್ಕೆ ವಿರೋಧ: ಜೂನ್‌ 26ಕ್ಕೆ ಮುಷ್ಕರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2025, 14:08 IST
Last Updated 23 ಫೆಬ್ರುವರಿ 2025, 14:08 IST
.
.   

ನವದೆಹಲಿ: ವಿದ್ಯುತ್‌ ವಲಯದ ಖಾಸಗೀಕರಣ ವಿರೋಧಿಸಿ ಜೂನ್‌ 26ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಅಖಿಲ ಭಾರತ ವಿದ್ಯುತ್‌ ಎಂಜಿನಿಯರ್‌ಗಳ ಒಕ್ಕೂಟವು (ಎಐಪಿಇಎಫ್‌) ಭಾನುವಾರ ಕರೆ ನೀಡಿದೆ.

ರಾಷ್ಟ್ರವ್ಯಾಪಿ ಮುಷ್ಕರದ ಯಶಸ್ಸಿಗಾಗಿ ಏಪ್ರಿಲ್‌, ಮೇ ತಿಂಗಳಲ್ಲಿ ದೇಶದ ಎಲ್ಲ ಪ್ರಾಂತ್ಯಗಳಲ್ಲೂ ಬೃಹತ್‌ ಸಮಾವೇಶ ನಡೆಸಲು ವಿದ್ಯುತ್‌ ಇಲಾಖೆಯ ನೌಕರರು ಮತ್ತು ಎಂಜಿನಿಯರ್‌ಗಳ ರಾಷ್ಟ್ರೀಯ ಸಮನ್ವಯ ಸಮಿತಿ (ಎನ್‌ಸಿಸಿಒಇಇಇ) ನಿರ್ಧರಿಸಿದೆ.

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಖಾಸಗೀಕರಣ ಪ್ರಕ್ರಿಯೆಯನ್ನು ವಿರೋಧಿಸಿ ನಾಲ್ಕು ಬೃಹತ್ ರ‍್ಯಾಲಿಗಳನ್ನು ನಡೆಸಲಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.