ಕ್ಷಿಪಣಿ ಪರೀಕ್ಷೆ ಯಶಸ್ವಿ
ಬಾಲೇಶ್ವರ: ಒಡಿಶಾದ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ‘ಪ್ರಳಯ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಂಗಳವಾರ ತಿಳಿಸಿದೆ.
ಪರೀಕ್ಷೆ ಸಂದರ್ಭದಲ್ಲಿ ಕ್ಷಿಪಣಿಗಳು ಉದ್ದೇಶಿತ ಪಥವನ್ನು ನಿಖರವಾಗಿ ಅನುಸರಿಸಿದವು ಮತ್ತು ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದವು ಎಂದು ಡಿಆರ್‌ಡಿಒ ಹೇಳಿದೆ.
‘ಕ್ಷಿಪಣಿ ವ್ಯವಸ್ಥೆಯ ದೀರ್ಘ ವ್ಯಾಪ್ತಿ, ಮಧ್ಯಮ ವ್ಯಾಪ್ತಿಯ ಸಾಮರ್ಥ್ಯ ಪರೀಕ್ಷೆಯ ಭಾಗವಾಗಿ ಜುಲೈ 28 ಮತ್ತು 29ರಂದು ‘ಪ್ರಳಯ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಯಿತು’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.