ADVERTISEMENT

ಸೈಪ್ರಸ್‌ಗೆ ಬಂದಿಳಿದ ರಾಮನಾಥ ಕೋವಿಂದ್‌

ಪಿಟಿಐ
Published 2 ಸೆಪ್ಟೆಂಬರ್ 2018, 13:34 IST
Last Updated 2 ಸೆಪ್ಟೆಂಬರ್ 2018, 13:34 IST
ನವದೆಹಲಿಯ ಪಾಲಂ ವಿಮಾನನಿಲ್ದಾಣದಿಂದ ಭಾನುವಾರ ಮೂರು ರಾಷ್ಟ್ರಗಳ ಪ್ರವಾಸಕ್ಕೆ ಹೊರಟ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪತ್ನಿ ಸವಿತಾ ಕೋವಿಂದ್‌ – ಪಿಟಿಐ ಚಿತ್ರ
ನವದೆಹಲಿಯ ಪಾಲಂ ವಿಮಾನನಿಲ್ದಾಣದಿಂದ ಭಾನುವಾರ ಮೂರು ರಾಷ್ಟ್ರಗಳ ಪ್ರವಾಸಕ್ಕೆ ಹೊರಟ ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪತ್ನಿ ಸವಿತಾ ಕೋವಿಂದ್‌ – ಪಿಟಿಐ ಚಿತ್ರ   

ಲರ್‌ನಾಕಾ, ಸೈಪ್ರಸ್‌: ಯುರೋಪ್‌ನ ಮೂರು ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಭಾನುವಾರ ಸೈಪ್ರಸ್‌ನ ಲರ್‌ನಾಕಾ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಬಂದಿಳಿದರು. ಸೈಪ್ರಸ್‌ನ ಇಂಧನ, ವಾಣಿಜ್ಯ ಮತ್ತು ಪ್ರವಾಸೋದ್ಯಮ ಸಚಿವ ಜಾರ್ಜಿಯೊಸ್‌ ಲಕ್ಕೊಟೈಪ್ರಿಸ್‌ ಅವರು ಕೋವಿಂದ್‌ ದಂಪತಿಯನ್ನು ಬರಮಾಡಿಕೊಂಡರು.

‘ಸೈಪ್ರಸ್‌ನಿಂದ ಪ್ರವಾಸ ಆರಂಭಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಎರಡು ರಾಷ್ಟ್ರಗಳು ಅತ್ಯಂತ ಸುಮಧುರ ಹಾಗೂ ಅಚಲ ಬಾಂಧವ್ಯ ಹೊಂದಿದೆ. ನನ್ನ ಪ್ರವಾಸ ಕೂಡ ಫಲಪ್ರದವಾಗಿ ಮುಂದುವರಿಯಲಿದೆ’ ಎಂದು ರಾಮನಾಥ ಕೋವಿಂದ್‌ ಅವರ ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಸೈಪ್ರಸ್‌ ನಂತರ, ಬಲ್ಗೇರಿಯಾ, ಜೆಕ್‌ ರಿಪಬ್ಲಿಕ್‌ ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ರಾಮನಾಥ ಕೋವಿಂದ್‌ ಅವರು ರಾಷ್ಟ್ರಪತಿಯಾಗಿ ಎರಡನೇ ವರ್ಷಕ್ಕೆ ಕಾಲಿಟ್ಟ ಬಳಿಕ ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.