ADVERTISEMENT

ವಿದೇಶಿ ಜೈಲುಗಳಲ್ಲಿ 8,189 ಭಾರತೀಯರು

ಪಿಟಿಐ
Published 18 ಜುಲೈ 2019, 19:45 IST
Last Updated 18 ಜುಲೈ 2019, 19:45 IST
   

ನವದೆಹಲಿ: 8,189 ಭಾರತೀಯರುವಿದೇಶಗಳ ಜೈಲುಗಳಲ್ಲಿ ಇದ್ದಾರೆ. ಅವರಲ್ಲಿ ವಿಚಾರಣಾಧೀನ ಕೈದಿಗಳೂ ಸೇರಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ. ಮುರಳೀಧರನ್‌ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

ಈ ಪೈಕಿ ಅತಿ ಹೆಚ್ಚು ಮಂದಿ ಸೌದಿ ಅರೇಬಿಯಾದ ಜೈಲುಗಳಲ್ಲಿದ್ದಾರೆ. ಅಲ್ಲಿನ ಜೈಲುಗಳಲ್ಲಿ ಇರುವ ಭಾರತೀಯರ ಸಂಖ್ಯೆ 1,811; ಅರಬ್‌ ಸಂಯುಕ್ತ ಸಂಸ್ಥಾನದಲ್ಲಿ 1,392 ಮತ್ತು ನೇಪಾಳದಲ್ಲಿ 1,160 ಭಾರತೀಯರು ಸೆರೆಮನೆಯಲ್ಲಿದ್ದಾರೆ.

ಕೆಲವು ದೇಶಗಳಲ್ಲಿ ಕಟ್ಟುನಿಟ್ಟಿನ ಖಾಸಗಿತನ ರಕ್ಷಣಾ ಕಾನೂನುಗಳಿವೆ. ಹಾಗಾಗಿ, ಅಲ್ಲಿನ ಸಂಸ್ಥೆಗಳು ಕೈದಿಗಳ ಮಾಹಿತಿ ಬಹಿರಂಗಪಡಿಸುವುದಿಲ್ಲ. ಕೈದಿ ಒಪ್ಪಿಗೆ ಕೊಟ್ಟರೆ ಮಾತ್ರ ಮಾಹಿತಿಯನ್ನು ಬಹಿರಂಗಪಡಿಸುತ್ತವೆ ಎಂದು ಮುರಳೀಧರನ್‌ ತಿಳಿಸಿದರು.

ADVERTISEMENT

2016ರಿಂದ ಈವರೆಗೆ, ಕೊಲ್ಲಿ ದೇಶಗಳಲ್ಲಿ 3,087 ಭಾರತೀಯರಿಗೆ ಕ್ಷಮಾದಾನ ಅಥವಾ ಶಿಕ್ಷೆಯಲ್ಲಿ ವಿನಾಯಿತಿ ದೊರೆತಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.