ADVERTISEMENT

ಸೇನೆಗೆ ನೇಮಕಾತಿ: ಪ್ರಕ್ರಿಯೆ ಚುರುಕಿಗೆ ಪ್ರಿಯಾಂಕಾ ಮನವಿ

ಪಿಟಿಐ
Published 29 ಮಾರ್ಚ್ 2022, 10:56 IST
Last Updated 29 ಮಾರ್ಚ್ 2022, 10:56 IST
ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ   

ನವದೆಹಲಿ:‌‘ಸೇನಾ ಪಡೆಗಳಿಗೆ ನೇಮಕಾತಿ ಪ್ರಕ್ರಿಯೆ ವಿಳಂಬವಾಗಿದೆ. ಆಕಾಂಕ್ಷಿಗಳ ಕಠಿಣ ಶ್ರಮವನ್ನು ಗೌರವಿಸಬೇಕಿದ್ದು, ಈ ನಿಟ್ಟಿನಲ್ಲಿ ಗಮನಹರಿಸಬೇಕು’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ‘ಸೇನೆಗೆ ಸೇರಲು ಆಸಕ್ತರಾಗಿರುವ ಲಕ್ಷಾಂತರ ಅಭ್ಯರ್ಥಿಗಳು ಇದಕ್ಕಾಗಿ ಸಿದ್ಧತೆ ನಡೆಸಿದ್ದಾರೆ. ಆದರೆ, ನೇಮಕಾತಿ ಪ್ರಕ್ರಿಯೆ ಅನಗತ್ಯವಾಗಿ ವಿಳಂಬವಾಗಿದೆ’ ಎಂದಿದ್ದಾರೆ.

ನೇಮಕಾತಿ ಪ್ರಕ್ರಿಯೆಯ ತೊಡಕುಗಳನ್ನು ಪಟ್ಟಿ ಮಾಡಿರುವ ಅವರು, ವಾಯುಪಡೆಗೆ ನೇಮಕಾತಿಗಾಗಿ 2020ರ ನವೆಂಬರ್‌ನಲ್ಲಿ ಪರೀಕ್ಷೆ ನಡೆದಿತ್ತು. ಫಲಿತಾಂಶ ಪ್ರಕಟವಾಗಿ ಇತರೆ ಪರೀಕ್ಷೆಗಳೂ ಆಗಿವೆ. ಆದರೆ, ಇನ್ನೂ ಆಯ್ಕೆ ಪಟ್ಟಿ ಪ್ರಕಟವಾಗಿಲ್ಲ ಎಂದಿದ್ದಾರೆ.

ADVERTISEMENT

ವಾಯುಪಡೆಯ ಯೋಧರ ನೇಮಕಾತಿಗೆ ಜುಲೈ 2021ರಲ್ಲಿ ಪರೀಕ್ಷೆ ನಡೆದಿದೆ. ಆದಷ್ಟು ಶೀಘ್ರ ಫಲಿತಾಂಶವನ್ನು ಪ್ರಕಟಿಸಿ, ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.