ADVERTISEMENT

ಕಾಸ್ಮೋಸ್‌ ಬ್ಯಾಂಕ್‌ ಸೈಬರ್‌ ದಾಳಿ: 11 ಮಂದಿ ದೋಷಿಗಳು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 13:36 IST
Last Updated 23 ಏಪ್ರಿಲ್ 2023, 13:36 IST
ಸೈಬರ್‌ ದಾಳಿ ತಂತ್ರಾಂಶ
ಸೈಬರ್‌ ದಾಳಿ ತಂತ್ರಾಂಶ   

ಪುಣೆ (ಪಿಟಿಐ): ಕಾಸ್ಮೋಸ್‌ ಬ್ಯಾಂಕ್‌ ಸೈಬರ್‌ ವಂಚನೆ ಪ್ರಕರಣದಲ್ಲಿ 11 ಆರೋಪಿಗಳನ್ನು ಇಲ್ಲಿನ ನ್ಯಾಯಾಲಯವೊಂದು ದೋಷಿಗಳೆಂದು ತೀರ್ಪು ನೀಡಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಶನಿವಾರ ಪ್ರಕರಣದ ವಿಚಾರಣೆ ನಡೆಸಿದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್‌ (ಪ್ರಥಮ ದರ್ಜೆ), ಒಂಬತ್ತು ಆರೋಪಿಗಳಿಗೆ ತಲಾ ನಾಲ್ಕು ವರ್ಷ  ಮತ್ತು ಇಬ್ಬರಿಗೆ ತಲಾ ಎರಡು ವರ್ಷ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

2018ರಲ್ಲಿ ಎರಡು ದಿನ ಬ್ಯಾಂಕ್‌ನ ಸರ್ವರ್‌ ಮೇಲೆ ಕುತಂತ್ರಾಂಶದ ನೆರವಿನಿಂದ ಸೈಬರ್‌ ದಾಳಿ ನಡೆಸಿದ್ದ ಮಾಹಿತಿಗಳ್ಳರು, ಸಾವಿರಾರು ಡೆಬಿಟ್‌ ಕಾರ್ಡ್‌ಗಳ ತದ್ರೂಪಿ ಸೃಷ್ಟಿಸಿ ₹94 ಕೋಟಿ ವಂಚನೆ ಎಸಗಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಕನಿಷ್ಠ 18 ಮಂದಿಯನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.