ADVERTISEMENT

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಕ್ವಿಕ್‌ ರಿಯಾಕ್ಷನ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಪಿಟಿಐ
Published 4 ಆಗಸ್ಟ್ 2019, 10:53 IST
Last Updated 4 ಆಗಸ್ಟ್ 2019, 10:53 IST
   

ಬಾಲಸೋರ್‌: ದೇಶಿಯವಾಗಿ ಅಭಿವೃದ್ಧಿಪಡಿಸಿದ ‘ಕ್ಷಿಪ್ರ ಪ್ರತಿಕ್ರಿಯೆಯ ಭೂಮಿಯಿಂದ ಆಕಾಶಕ್ಕೆ ಚಿಮ್ಮುವ (ಕ್ವಿಕ್‌ ರಿಯಾಕ್ಷನ್‌ ಸರ್ಫೇಸ್‌ ಟು ಏರ್‌ ಕ್ಷಿಪಣಿ/ಕ್ಯೂಆರ್‌ಎಸ್‌ಎಎಂ)’ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಭಾನುವಾರ ಯಶಸ್ವಿಯಾಗಿದೆ.

ಒಡಿಶಾದ ಚಂಡೀಪುರದಲ್ಲಿರುವ ಪರೀಕ್ಷಾ ಕೇಂದ್ರದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಸಂಚಾರಿ ಉಡಾಹಕದಿಂದ (ಟ್ರಕ್) ಬೆಳಗ್ಗೆ 11.05ರ ವೇಳೆಗೆ ಕ್ಷಿಪಣಿ ಉಡಾವಣೆಗೊಂಡಿತು ಎಂದು ಡಿಆರ್‌ಡಿಒ ಮೂಲಗಳು ತಿಳಿಸಿವೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು(ಡಿಆರ್‌ಡಿಒ) ಭಾರತೀಯ ಭೂಸೇನೆಗಾಗಿ ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. 25–30 ಕಿ.ಮೀ. ಎತ್ತರಕ್ಕೆ ಚಿಮ್ಮುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯ ಮೊದಲ ಪರೀಕ್ಷೆ 2017 ಜೂನ್‌ 4ರಂದು ನಡೆದಿತ್ತು. 2019 ಫೆಬ್ರವರಿ 26ರಂದು ಒಂದೇ ದಿನ ಎರಡು ಯಶಸ್ವಿ ಪರೀಕ್ಷೆ ನಡೆಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.