ADVERTISEMENT

ಜವಳಿ ಕ್ಷೇತ್ರ | ಒಬಿಸಿ ಕುಶಲಕರ್ಮಿಗಳ ನಿರ್ಲಕ್ಷ್ಯ: ರಾಹುಲ್‌ ಗಾಂಧಿ

ಪಿಟಿಐ
Published 12 ಏಪ್ರಿಲ್ 2025, 13:45 IST
Last Updated 12 ಏಪ್ರಿಲ್ 2025, 13:45 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಜವಳಿ ಉದ್ಯಮದಲ್ಲಿರುವ ಹಿಂದುಳಿದ ವರ್ಗಗಳ ಅನೇಕ ನುರಿತ ಕುಶಲಕರ್ಮಿಗಳು ಆ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಈ ಅನ್ಯಾಯ ಮತ್ತು ನಿರ್ಲಕ್ಷ್ಯ ಧೋರಣೆಯ ವಿರುದ್ಧ ನಾನು ಹೋರಾಡುತ್ತೇನೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. 

ಜವಳಿ ಉದ್ಯಮದ ಕುಶಲಕರ್ಮಿಗಳ ಕಾರ್ಯಾಗಾರವೊಂದಕ್ಕೆ ತಾವು ಭೇಟಿ ನೀಡಿರುವ ವಿಡಿಯೊವನ್ನು ರಾಹುಲ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ವಿಕ್ಕಿ ಎಂಬ ಯುವಕ ತನ್ನ ಕೌಶಲದ ಆಧಾರದ ಮೇಲೆ ಜವಳಿ ಕ್ಷೇತ್ರದಲ್ಲಿ ವ್ಯಾಪಾರ ನಡೆಸುತ್ತಿದ್ದಾನೆ. ‘ಈ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಒಬಿಸಿ (ಹಿಂದುಳಿದ ವರ್ಗ) ವ್ಯಕ್ತಿಯನ್ನು ತಾನೆಂದಿಗೂ ಭೇಟಿಯಾಗಿಲ್ಲ ಎಂದು ವಿಕ್ಕಿ ನನಗೆ ಹೇಳಿದನು’ ಎಂದು ರಾಹುಲ್‌ ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಜವಳಿ ಕುಶಲಕರ್ಮಿಗಳು ದಿನಕ್ಕೆ 12 ಗಂಟೆ ಶ್ರಮವಹಿಸಿ, ಸೂಜಿ ಮತ್ತು ದಾರದಿಂದ ಜಾದು ಮಾಡಿದಂತೆ ಅದ್ಭುತವಾಗಿ ಕೆಲಸ ಮಾಡುತ್ತಾರೆ. ಆದರೆ ಇವರು ಮೆಚ್ಚುಗೆಗೆ ಪಾತ್ರರಾಗಿಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.