ADVERTISEMENT

ಮಹಾಕುಂಭಮೇಳದ ಗಂಗಾಜಲವನ್ನು ಮುಟ್ಟಿ ನೋಡಲು ನಿರಾಕರಿಸಿದೆ: ರಾಜ್‌ ಠಾಕ್ರೆ 

ಪಿಟಿಐ
Published 9 ಮಾರ್ಚ್ 2025, 14:05 IST
Last Updated 9 ಮಾರ್ಚ್ 2025, 14:05 IST
<div class="paragraphs"><p>ರಾಜ್‌ ಠಾಕ್ರೆ</p></div>

ರಾಜ್‌ ಠಾಕ್ರೆ

   

ಪಿಟಿಐ ಚಿತ್ರ

ಮುಂಬೈ: ಪ್ರಯಾಗರಾಜ್‌ನ ಗಂಗಾ ನದಿಯ ತಟದ ಸಂಗಮದಲ್ಲಿ ನಡೆದ ಮಹಾಕುಂಭಮೇಳದಿಂದ ಆಪ್ತರೊಬ್ಬರು ತಂದಿದ್ದ ಗಂಗಾಜಲವನ್ನು ಮುಟ್ಟಿ ನೋಡಲು ನಿರಾಕರಿಸಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾದ ಅಧ್ಯಕ್ಷ ರಾಜ್‌ ಠಾಕ್ರೆ ಹೇಳಿದ್ದಾರೆ.

ADVERTISEMENT

ಪುಣೆಯ ಪಿಂಪ್ರಿ– ಚಿಂಚವಾಡ್‌ನಲ್ಲಿ ಏರ್ಪಡಿಸಿದ್ದ ಪಕ್ಷದ 19 ವರ್ಷಾಚರಣೆಯಲ್ಲಿ ಮಾತನಾಡಿದ ಅವರು, ಎಂಎನ್‌ಎಸ್‌ ಪಕ್ಷದ ನಾಯಕ ಬಾಲ ನಂದಗಾಂವ್ಕರ್‌  ಅವರು ಗಂಗಾಜಲವನ್ನು ತಂದುಕೊಟ್ಟಿದ್ದರು. ಅದನ್ನು ನಾನು ಮುಟ್ಟಿಯೂ ನೋಡಲಿಲ್ಲ ಎಂದರು.

ಜನರು ಮೂಢನಂಬಿಕೆ ಬಗ್ಗೆ ಎಚ್ಚರದಿಂದ ಇರಬೇಕು. ನಂಬಿಕೆ ಹಾಗೂ ಮೂಡನಂಬಿಕೆಯ ವ್ಯತ್ಯಾಸವನ್ನು ತಿಳಿದಿರಬೇಕು’ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ರಾಜ್‌ ಅವರ ಈ ಹೇಳಿಕೆಗೆ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಹಾಗೂ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.