ADVERTISEMENT

ಎಸಿಬಿ ವಶಕ್ಕೆ ಐಎಎಸ್‌ ಅಧಿಕಾರಿ ಇಂದ್ರ ರಾವ್‌

ಪಿಟಿಐ
Published 24 ಡಿಸೆಂಬರ್ 2020, 17:03 IST
Last Updated 24 ಡಿಸೆಂಬರ್ 2020, 17:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಟ(ರಾಜಸ್ತಾನ್‌): ಭ್ರಷ್ಟಾಚಾರ ಆರೋಪದಡಿ ಬುಧವಾರ ಬಂಧನಕ್ಕೆ ಒಳಗಾಗಿದ್ದ ಐಎಎಸ್‌ ಅಧಿಕಾರಿ ಇಂದ್ರ ರಾವ್‌ ಅವರನ್ನು ಇಲ್ಲಿನ ನ್ಯಾಯಾಲಯವೊಂದು ಗುರುವಾರ ಒಂದು ದಿನ ಪೊಲೀಸ್‌ ವಶಕ್ಕೆ ನೀಡಿ ಆದೇಶಿಸಿದೆ.

ರಾವ್‌ ಅವರ ಆಪ್ತ ಸಹಾಯಕ ಡಿ.9ರಂದು ₹1.40 ಲಕ್ಷ ಲಂಚ ತೆಗೆದುಕೊಳ್ಳುವ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದ. ಇದಾದ ನಂತರದಲ್ಲಿ ಬಾರಾ ಜಿಲ್ಲಾಧಿಕಾರಿ ಹುದ್ದೆಯಿಂದ ರಾವ್‌ ಅವರನ್ನು ವಜಾಗೊಳಿಸಲಾಗಿತ್ತು. ರಾವ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಒಂದು ದಿನ ಕಸ್ಟಡಿಗೆ ನೀಡಬೇಕು ಎಂದು ಎಸಿಬಿ ನ್ಯಾಯಾಲಯಕ್ಕೆ ಮನವಿ ಮಾಡಿತ್ತು.

ನಿರಾಕ್ಷೇಪಣಾ ಪತ್ರ ನೀಡುವುದಕ್ಕೆ ರಾವ್‌ ಅವರ ಆಪ್ತ ಸಹಾಯಕ ₹2.40 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಪೆಟ್ರೋಲ್‌ ಪಂಪ್‌ ಡೀಲರ್‌ ಒಬ್ಬರು ಎಸಿಬಿಗೆ ದೂರು ನೀಡಿದ್ದರು. ಈ ಕುರಿತು ತನಿಖೆಯ ವೇಳೆ ರಾವ್‌ ಅವರೂ ಇದರಲ್ಲಿ ಶಾಮೀಲಾಗಿರುವುದು ಪತ್ತೆಯಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.