ಜೈಪುರ: ದಿಢೀರ್‌ರಾಜಕೀಯ ಬೆಳವಣಿಗೆಗಳ ಕಾರಣ ರಾಜಸ್ಥಾನ ಬಿಜೆಪಿಯು ಮಂಗಳವಾರ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಿತು. ಇಂದಿನ ಬದಲಾಗಿ ಗುರುವಾರ ಜೈಪುರದಲ್ಲಿರುವ ಪಕ್ಷದ ಕೇಂದ್ರ ಕಚೇರಿಗೆ ಬರಬೇಕು ಎಂದೂ ತನ್ನ ಶಾಸಕರಿಗೆ ಬಿಜೆಪಿ ಸೂಚಿಸಿದೆ.
ಆಗಸ್ಟ್ 14ರಂದು ವಿಧಾನಸಭೆ ಅಧಿವೇಶನ ಆರಂಭವಾಗಬೇಕಿದ್ದ ಕಾರಣ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಸ್ಥಳೀಯ ಹೋಟೆಲ್‌ನಲ್ಲಿ ಮಂಗಳವಾರ ಸಂಜೆ ಕರೆದಿತ್ತು. ಸಭೆ ಮಂದೂಡಿರುವ ಕುರಿತುವಿರೋಧಪಕ್ಷದ ನಾಯಕ ಗುಲಾಬ್ ಚಂದ್ ಕಟಾರಿಯಾ ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.