ADVERTISEMENT

ರಾಜಸ್ಥಾನದ ಈ ‘ಕಾಂಗ್ರೆಸ್’ಗೆ ಎರಡು ಕೈ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 11:43 IST
Last Updated 22 ಜನವರಿ 2020, 11:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೈಪುರ:ರಾಜಸ್ಥಾನದ ಕಾಂಗ್ರೆಸ್ ಕಾರ್ಯಕರ್ತ ವಿನೋದ್ ಜೈನ್ ಎಂಬವರು ಪಕ್ಷದ ಮೇಲಿನ ಪ್ರೀತಿಯಿಂದ ಮಗನಿಗೆ ‘ಕಾಂಗ್ರೆಸ್’ ಎಂದು ನಾಮಕರಣ ಮಾಡಿದ್ದಾರೆ.

ಪಕ್ಷವನ್ನು ಅತಿಯಾಗಿ ಪ್ರೀತಿಸುವ ವಿನೋದ್,ಕುಟುಂಬದವರು ವಿರೋಧಿಸಿದರೂ ಲೆಕ್ಕಿಸದೆ ಮಗನಿಗೆ ಪಕ್ಷದ ಹೆಸರಿಟ್ಟಿದ್ದಾರೆ.ವಿಲಕ್ಷಣ ಎಂದು ಅನ್ನಿಸಿದರೂ‍ಪರವಾಗಿಲ್ಲ, ಮಗನಿಗೆ ಪಕ್ಷದ ಹೆಸರೇ ಸೂಕ್ತ ಎಂದಿದ್ದಾರೆ.

ಮಗುವಿನ ಜನನ ಪ್ರಮಾಣಪತ್ರದಲ್ಲಿಯೂ ‘ಕಾಂಗ್ರೆಸ್‌ ಜೈನ್’ ಎಂದೇ ಉಲ್ಲೇಖಿಸಲಾಗಿದೆ. ಮಗನೂ ತನ್ನಂತೆಯೇ ಪಕ್ಷಕ್ಕೆ ನಿಷ್ಠನಾಗಿರಬೇಕು ಎಂಬುದು ವಿನೋದ್ ಬಯಕೆ.

ADVERTISEMENT

‘ನನ್ನ ಮಗನೂ ಮುಂದೆ ಪಕ್ಷದಲ್ಲಿ ಸಕ್ರಿಯ ಪಾತ್ರವಹಿಸುವ ಭರವಸೆಯೊಂದಿಗೆ ಈ ಹೆಸರಿಟ್ಟಿದ್ದೇನೆ’ ಎಂದು ವಿನೋದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.