ADVERTISEMENT

ಕಾರು–ಟ್ರಕ್‌ ಡಿಕ್ಕಿ: 11 ಮಂದಿ ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 12:05 IST
Last Updated 14 ಮಾರ್ಚ್ 2020, 12:05 IST
   

ಜೋಧಪುರ: ಶೇಘಡದಸೋಯಿಂತಾರ ಗ್ರಾಮದ ಬಳಿ ಶನಿವಾರ ಕಾರು ಮತ್ತು ಟ್ರಕ್‌ ಮಧ್ಯೆ ಡಿಕ್ಕಿ ಸಂಭವಿಸಿ, ನವ ವಿವಾಹಿತ ದಂಪತಿ ಸೇರಿದಂತೆ ಒಟ್ಟು 11 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ದೇವರ ದರ್ಶನ ಪಡೆಯಲುದಂಪತಿ ವಿಕ್ರಮ್‌ ಹಾಗೂ ಸೀತಾ ಜೊತೆ ಕುಟುಂಬಸ್ಥರು, ಭಲೋತ್ರಾ ದಿಂದ ಬರಮೇರ್‌ಗೆ ಹೋಗುವ ದಾರಿ ಮಧ್ಯೆ ಈ ಅಪಘಾತ ನಡೆದಿದೆ.ಇದರಲ್ಲಿ 11 ಮಂದಿ ಸ್ಥಳದಲ್ಲಿ ಮೃತಪಟ್ಟಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಜೋಧಪುರ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ತಕ್ಷಣವೇ ಘಟನಾ ಸ್ಥಳಕ್ಕಾಗಮಿಸಿದ ಸ್ಥಳೀಯರು ಕಾರಿನಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯುವಲ್ಲಿ ಸಹಾಯ ಮಾಡಿದರು. ಕ್ರೇನ್‌ನ ಸಹಾಯದಿಂದ ವಾಹನಗಳನ್ನು ಬೇರ್ಪಡಿಸಿ, ಮೃತ ದೇಹಗಳನ್ನು ಹೊರ ತೆಗೆಯಲಾಯಿತು’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.