ADVERTISEMENT

ಕಾಶ್ಮೀರದ ಲಡಾಕ್‌ಗೆ ನಾಳೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮೊದಲ ಭೇಟಿ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 9:56 IST
Last Updated 2 ಜೂನ್ 2019, 9:56 IST
   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಸಂಪುಟದ ನೂತನ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸೋಮವಾರ ಜಮ್ಮು ಮತ್ತು ಕಾಶ್ಮೀರದ ಲಡಾಕ್‌ ವಲಯಕ್ಕೆ ಭೇಟಿ ನೀಡಲಿದ್ದಾರೆ.

ರಕ್ಷಣಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲ್ಲಿಗೆ ಮೊದಲ ಭೇಟಿ ನೀಡುತ್ತಿರುವ ರಾಜನಾಥ್‌, ಈ ವೇಳೆ ಯೋಧರಜತೆ ಸಂವಾದ ನಡೆಸಲಿದ್ದಾರೆ. ತಮ್ಮ ಭೇಟಿಯ ಕುರಿತು ಅವರು ಟ್ವೀಟ್‌ ಮಾಡಿದ್ದಾರೆ.

ಸಿಯಾಚಿನ್‌ನಲ್ಲಿನ ಯುದ್ಧ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಲಿದ್ದಾರೆ. ಇಲ್ಲಿನಸೇನಾ ಶಿಬಿರಕ್ಕೆ ತೆರಳಿ ಯೋಧರ ಜತೆ ಮಾತುಕತೆ ನಡೆಸಲಿದ್ದಾರೆ.

ADVERTISEMENT

ಮೇ 31ರಂದು ಕೇಂದ್ರ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರಾಜನಾಥ್‌ ಸಿಂಗ್‌ ಅವರು ನೂತನ ಸಚಿವರಾಗಿ ಶನಿವಾರ ಅಧಿಕಾರ ಸ್ವೀಕರಿಸಿದ್ದರು. ಜತೆಗೆ, ಅಧಿಕಾರಿಗಳ ಜತೆಗೆ ಮಾತನಾಡಿ ಮಾಹಿತಿ ಪಡೆದಿದ್ದರು.

ಸ್ಥಳೀಯರು ಮತ್ತು ಪೊಲೀಸರು, ಯೋಧರ ಮಧ್ಯೆ ಒಂದಿಲ್ಲೊಂದು ಕಾರಣಕ್ಕೆ ಗಲಾಟೆ, ಕಲ್ಲು ತೂರಾಟ, ಗಡಿಯಲ್ಲಿ ಉಗ್ರರಒಳನುಸುಳುವಿಕೆ, ದಾಳಿಗಳಿಂದ ಸದಾ ಸುದ್ದಿಯಲ್ಲಿರುವ ಜಮ್ಮು ಮತ್ತು ಕಾಶ್ಮಿರಕ್ಕೆ ಸಚಿವರು ಭೇಟಿ ನೀಡುತ್ತಿರುವುದು ಮಹತ್ವ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.