ಹುಲಿ (ಪ್ರಾತಿನಿಧಿಕ ಚಿತ್ರ)
ಭೋಪಾಲ್: ಮಧ್ಯಪ್ರದೇಶದ ರಾಯಸೇನ ಜಿಲ್ಲೆಯ ರಾತಾಪಾನಿ ಅರಣ್ಯವನ್ನು ಹುಲಿ ಸಂರಕ್ಷಣಾ ವಲಯ ಪ್ರದೇಶ ಎಂದು ಗುರುತಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಸತ್ಪುರ್, ಕಾನ್ಹಾ, ಬಾಂಧವಗಢ, ಪೆಂಚ್, ಸಂಜಯ್ ದುಬರಿ, ಪನ್ನಾ ಮತ್ತು ವೀರಂಗನಾ ದುರ್ಗಾವತಿಯನ್ನು ಹುಲಿ ಮೀಸಲು ಪ್ರದೇಶವಾಗಿ ಘೋಷಿಸಿತ್ತು. ಈಗ ರಾಜ್ಯದ 8ನೇ ಹುಲಿ ಸಂರಕ್ಷಣಾ ವಲಯವಾಗಿ ರಾತಾಪಾನಿ ಅರಣ್ಯವನ್ನು ಈ ಪಟ್ಟಿಗೆ ಸೇರಿಸಿದೆ.
ರಾತಾಪಾನಿ ಹುಲಿ ಸಂರಕ್ಷಣಾ ವಲಯವು ಒಟ್ಟು 1,271.465 ಚದರ ಕಿಲೋ ಮೀಟರ್ ವಿಸ್ತಾರವಾಗಿದೆ.
ಅದರಲ್ಲಿ 763.812 ಚದರ ಕಿ.ಮೀಯನ್ನು ಕೋರ್ ವಲಯ ಮತ್ತು 507.653 ಚದರ ಕಿ.ಮೀಯನ್ನು ಬಫರ್ ವಲಯ ಎಂದು ಗುರುತಿಸಲಾಗಿದೆ. ಹುಲಿ ಸಂರಕ್ಷಣಾ ವಲಯದದ ವ್ಯಾಪ್ತಿಗೆ ಒಟ್ಟು 9 ಗ್ರಾಮಗಳು ಒಳಪಡುತ್ತವೆ, ಆದರೆ ಅವುಗಳನ್ನು ಕೋರ್ ವಲಯದಲ್ಲಿ ಸೇರಿಸಲಾಗಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.