ADVERTISEMENT

‘ಭಾರತೀಯ ಕಾರ್ಮಿಕರ ಕರೆತರಲು ಕ್ರಮ’

ಪಿಟಿಐ
Published 20 ಡಿಸೆಂಬರ್ 2018, 19:48 IST
Last Updated 20 ಡಿಸೆಂಬರ್ 2018, 19:48 IST

ಚಂಡೀಗಡ: ಸೌದಿ ಅರೇಬಿಯಾದಲ್ಲಿ ಸಿಲುಕಿಕೊಂಡಿರುವ 3,000 ಭಾರತೀಯ ಕಾರ್ಮಿಕರಿಗೆ ನಿರಾಳತೆ ತರುವಂತಹ ಬೆಳವಣಿಗೆಯಾಗಿದ್ದು, ಸ್ವದೇಶಕ್ಕೆ ಮರಳಲು ಸಿದ್ಧವಿರುವ ಕಾರ್ಮಿಕರಿಗೆಟಿಕೆಟ್‌ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ಸಚಿವೆ ಹರ್‌ಸಿಮ್ರತ್ ಕೌರ್ ಬಾದಲ್ ಗುರುವಾರ ತಿಳಿಸಿದ್ದಾರೆ.

ಸೌದಿಯಲ್ಲಿಯೇ ಉದ್ಯೋಗ ಮುಂದುವರಿಸಲು ಇಚ್ಛಿಸುವವರಿಗೆ ಅನುಮತಿ ನವೀಕರಿಸಲು ಸಹ ಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಉದ್ಯೋಗದಾತರು ವೇತನ ಪಾವತಿಸದೆ ಇರುವುದರಿಂದಭಾರತೀಯ ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಲ್ಲದೆ ಅವರವೀಸಾ ಅವಧಿಯೂ ಮುಗಿದು ಹೋಗಿದೆ.

ADVERTISEMENT

ವಿದೇಶಾಂಗ ವ್ಯವಹಾರಗಳ ಸಚಿವೆಸುಷ್ಮಾ ಸ್ವರಾಜ್ ಅವರು ತಮಗೆ ಬರೆದ ಪತ್ರದ ಮಾಹಿತಿ ಉಲ್ಲೇಖಿಸಿದ ಹರ್‌ಸಿಮ್ರತ್ ಕೌರ್‌, ‘ರಿಯಾದ್‌ನಲ್ಲಿರುವ 13 ಕಟ್ಟಡ ನಿರ್ಮಾಣ ಸ್ಥಳಗಳಿಗೆ ಅಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಭೇಟಿ ನೀಡಿ ಕಾರ್ಮಿಕರ ಯೋಗಕ್ಷೇಮ ವಿಚಾರಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.