ADVERTISEMENT

ಬಡವರ ಭೂಮಿ ಆಕ್ರಮಿಸಿದವರಿಗೆ ತಕ್ಕ ಪಾಠ: ಯೋಗಿ ಆದಿತ್ಯನಾಥ

ಪಿಟಿಐ
Published 11 ಡಿಸೆಂಬರ್ 2024, 16:05 IST
Last Updated 11 ಡಿಸೆಂಬರ್ 2024, 16:05 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಗೋರಖಪುರ: ಬಡವರ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಲ್ಲಿ ಅದನ್ನು ತೆರವುಗೊಳಿಸಿ, ಅತಿಕ್ರಮಣಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

‘ಭೂ ಒತ್ತುವರಿ ಪ್ರಕರಣಗಳ ಬಗ್ಗೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಬಡವರನ್ನು ಶೋಷಿಸುವ ಭೂ ಮಾಫಿಯಾಗಳು ಹಾಗೂ ಗೂಂಡಾಗಳನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡಬಾರದು’ ಎಂದು ಸೂಚನೆ ನೀಡಿದ್ದಾರೆ.

‘ದುರ್ಬಲರ ಮೇಲೆ ದಬ್ಬಾಳಿಕೆ ನಡೆಸುವ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡು, ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಸರ್ಕಾರ ಕಟಿಬದ್ಧವಾಗಿದೆ’ ಎಂದು ಆದಿತ್ಯನಾಥ ಅವರು ಗೋರಕನಾಥ್ ದೇವಸ್ಥಾನದಲ್ಲಿ ನಡೆದ ‘ಜನತಾ ದರ್ಶನ’ ಕಾರ್ಯಕ್ರಮದಲ್ಲಿ ಹೇಳಿದರು.

ADVERTISEMENT

ಭೂ ಮಾಫಿಯಾ ಹಾಗೂ ಅತಿಕ್ರಮಣಕಾರರಿಗೆ ತಕ್ಕ ಪಾಠ ಕಲಿಸಲು ಬದ್ಧರಾಗಿದ್ದು, ತಾವು ಅಧಿಕಾರದಲ್ಲಿರುವವರೆಗೆ, ಯಾವೊಬ್ಬ ಬಡವರೂ ಅತಿಕ್ರಮಣಕ್ಕೆ ಹೆದರಿ ಪಲಾಯನ ಮಾಡಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.