ADVERTISEMENT

ಔರಂಗಾಬಾದ್‌ ಮರುನಾಮಕರಣ:ಶಿವಸೇನೆ–ಕಾಂಗ್ರೆಸ್‌ ನಡುವೆ ಭಿನ್ನಮತ

ಪಿಟಿಐ
Published 3 ಜನವರಿ 2021, 8:16 IST
Last Updated 3 ಜನವರಿ 2021, 8:16 IST
ಶಿವಸೇನಾ
ಶಿವಸೇನಾ   

ಔರಂಗಾಬಾದ್‌: ಔರಂಗಾಬಾದ್‌ ನಗರಕ್ಕೆ ಸಂಭಾಜಿನಗರ ಎಂದು ಮರುನಾಮಕರಣ ಮಾಡುವಂತೆ ಶಿವಸೇನೆ ಒತ್ತಾಯಿಸಿದ್ದು, ಈ ವಿಷಯ ಮಹಾ ವಿಕಾಸ್‌ ಅಘಾಡಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ

ಈ ಮಧ್ಯೆ, ಇತಿಹಾಸಕಾರರಾದ ಡಾ.ದುಲಾರಿ ಖುರೇಷಿ ಅವರು, ‘ಔರಂಗಾಬಾದ್‌ ಅನ್ನು ಶತಮಾನಗಳಿಂದ ರಾಜ್‌ ತಡಾಕ್‌, ಖಡಕಿ ಮತ್ತು ಫತೇನಗರ ಎಂದೂ ಕರೆಯಲಾಗುತ್ತಿದೆ’ ಎಂದು ತಿಳಿಸಿದರು.

‘ಔರಂಗಾಬಾದ್‌ ಅನ್ನು ರಾಜ್ ತಡಾಗ್‌ ಎಂದು ಕರೆಯಲಾಗುತ್ತಿತ್ತು. ಕನ್ಹೇರಿ ಗುಹೆಯಲ್ಲಿರುವ ಶಾಸನದಲ್ಲಿ ಈ ಉಲ್ಲೇಖವಿದೆ. ಲೇಖಕ ಡಾ.ರಮೇಶ್ ಶಂಕರ್ ಗುಪ್ಟೆ ಕೂಡ ತಮ್ಮ ಕೃತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ’ ಎಂದೂ ಹೇಳಿದರು.

ADVERTISEMENT

ಸಂಭಾಜಿನಗರ ಹೆಸರನ್ನು ಶಿವಸೇನೆ ಸ್ಥಾಪಕ ಭಾಳಾಠಾಕ್ರೆ ನೀಡಿದ್ದರು ಎಂದು ಶಿವಸೇನೆ ಶಾಸಕ ಅಂಬಾದಾಸ್ ದಾನ್ವೆ ಹೇಳಿದರು. ಸಂಭಾಜಿ ರಾಜೆ ಅಂತ್ಯಕ್ರಿಯೆ ನಗರ ಸಮೀಪ ನಡೆದಿದೆ.ಇದೆ ಹೆಸರು ಸೂಕ್ತ ಎಂದು ಪ್ರತಿಪಾದಿಸುತ್ತಾರೆ.

ಎಐಎಂಐಎಂ ಸಂಸದ ಇಮ್ತಿಯಾಜ್‌ ಜಲೀಲ್ ಅವರು, ಹೆಸರು ಬದಲಿಸುವ ಮೂಲಕ ಇತಿಹಾಸ ಬದಲಿಸಲಾಗದು. ಹೆಸರು ಬದಲಿಸಲು ಮಾಡುವ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೇಕೆ ಬಳಸಬಾರದು ಎಂದು ಪ್ರಶ್ನಿಸಿದರು.

ಬಿಜೆಪಿ ಶಾಸಕಕ ಅತುಲ್‌ ಸಾವೆ ಅವರು, ಯಾರೊಬ್ಬ ಮುಸಲ್ಮಾನರು ತಮ್ಮ ಮಕ್ಕಳಿಗೆ ಔರಂಗಜೇಬ್ ಹೆಸರಿಡುವುದಿಲ್ಲ. ಇನ್ನು ಆ ಹೆಸರಿನಿಂದ ಸಿಟಿಯನ್ನು ಏಕೆ ಗುರುತಿಸಬೇಕು ಎಂದು ಪ್ರಶ್ನಿಸುತ್ತಾರೆ.

ಹೆಸರು ಬದಲಾವಣೆ ಕುರಿತು ಶಿವಸೇನೆ 1995ರಲ್ಲಿ ಮೊದಲು ಒತ್ತಾಯಿಸಿತ್ತು. ಔರಂಗಾಬಾದ್ ನಗರಪಾಲಿಕೆಯು ಅದೇ ವರ್ಷ ನಿರ್ಣಯ ಕೈಗೊಂಡಿತ್ತುಉ. ಇದನ್ನು ಕಾಂಗ್ರೆಸ್‌ ಸದಸ್ಯ ಹೈಕೋರ್ಟ್, ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೆಸರು ಬದಲಾವಣೆಗೆ ಕಾಂಗ್ರೆಸ್ ಪಕ್ಷದ ವಿರೋಧವಿದೆ.

‘ಹೆಸರು ಬದಲಿಸುವ ನಗರದ ಗುರುತು ಬದಲಿಸಲಾಗದು. ಔರಂಗಾಬಾದ್‌ ಹೆಸರು ಪ್ರಸಿದ್ಧವಾಗಿದೆ. ಏನೇ ಹೆಸರಿಟ್ಟರೂ ಜನರು ಔರಂಗಾಬಾದ್ ಎಂದೇ ಗುರುತಿಸುತ್ತಾರೆ’ ಎಂದು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಮರಾಠಾವಾಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥೆ ಡಾ. ಪುಷ್ಪಾ ಗಾಯಕ್ವಾಡ್ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.