ADVERTISEMENT

ವಂಚನೆ ಪ್ರಕರಣ: ಪ್ರಿಯಾಂಕಾ ಗಾಂಧಿ ಪತಿ ವಾದ್ರಾಗೆ ಮಧ್ಯಂತರ ಜಾಮೀನು

ಪಿಟಿಐ
Published 2 ಫೆಬ್ರುವರಿ 2019, 20:24 IST
Last Updated 2 ಫೆಬ್ರುವರಿ 2019, 20:24 IST
ರಾಬರ್ಟ್‌ ವಾದ್ರಾ
ರಾಬರ್ಟ್‌ ವಾದ್ರಾ   

ನವದೆಹಲಿ: ಹಣ ವಂಚನೆ ಪ್ರಕರಣದ ಆರೋಪಿಯಾಗಿರುವ ರಾಬರ್ಟ್‌ ವಾದ್ರಾ ಅವರಿಗೆ ದೆಹಲಿ ಕೋರ್ಟ್‌ ಶನಿವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ, ಜಾರಿ ನಿರ್ದೇಶನಾಲಯಕ್ಕೆ ಹಾಜರಾಗಿ ತನಿಖೆಗೆ ಸಹಕಾರ ನೀಡುವಂತೆ ಅದು ಸೂಚಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿಯಾಗಿರುವ ವಾದ್ರಾ, ಶುಕ್ರವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಲಂಡನ್‌ನಲ್ಲಿ ₹17.44 ಕೋಟಿ (19 ಮಿಲಿಯನ್‌ ಪೌಂಡ್‌) ಮೊತ್ತದ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಪ್ರಕರಣದಲ್ಲಿ ವಾದ್ರಾ ಆರೋಪಿಯಾಗಿದ್ದಾರೆ.ಈ ಆಸ್ತಿಯ ನಿಜವಾದ ಒಡೆಯರು ವಾದ್ರಾ ಎಂಬ ಆರೋಪವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT