ADVERTISEMENT

ಮರಿಯುಪೋಲ್‌ಗೆ ಪುಟಿನ್‌ ಭೇಟಿ

ಏಜೆನ್ಸೀಸ್
Published 19 ಮಾರ್ಚ್ 2023, 14:27 IST
Last Updated 19 ಮಾರ್ಚ್ 2023, 14:27 IST
ವ್ಲಾಡಿಮಿರ್‌ ಪುಟಿನ್‌
ವ್ಲಾಡಿಮಿರ್‌ ಪುಟಿನ್‌   

ಕೀವ್‌ (ಎಪಿ): ಉಕ್ರೇನ್‌ನಿಂದ ವಶಕ್ಕೆ ಪಡೆದಿರುವ ಮರಿಯುಪೋಲ್‌ ಬಂದರು ನಗರಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭೇಟಿ ನೀಡಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

ಶನಿವಾರ ಪುಟಿನ್‌ ಅವರು ಮರಿಯುಪೋಲ್‌ನಿಂದ ಅಲ್ಪ ದೂರದಲ್ಲಿರುವ ಕ್ರಿಮಿಯಾಗೆ ಭೇಟಿ ನೀಡಿದ್ದರು.

‘ಹೆಲಿಕಾಪ್ಟರ್‌ನಲ್ಲಿ ಮರಿಯುಪೋಲ್‌ಗೆ ಬಂದಿಳಿದ ಪುಟಿನ್‌ ನಗರದಾದ್ಯಂತ ಸುತ್ತಾಡಿದರು. ನಂತರ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಆರ್ಟ್ ಶಾಲೆಗೆ ಭೇಟಿ ಮಕ್ಕಳೊಂದಿಗೂ ಮಾತುಕತೆ ನಡೆಸಿದರು’ ಎಂದು ಅದು ತಿಳಿಸಿದೆ.

ADVERTISEMENT

ಕಳೆದ ಮೇ ನಲ್ಲಿ ಮರಿಯುಪೋಲ್ ಅನ್ನು ರಷ್ಯಾ ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.