ADVERTISEMENT

36 ವರ್ಷಗಳ ಬಳಿಕ ರಶ್ದಿ ಅವರ ‘ಸಟಾನಿಕ್ ವರ್ಸಸ್‌’ ಪುಸ್ತಕ ದೆಹಲಿಯಲ್ಲಿ ಮಾರಾಟ

ಪಿಟಿಐ
Published 25 ಡಿಸೆಂಬರ್ 2024, 13:00 IST
Last Updated 25 ಡಿಸೆಂಬರ್ 2024, 13:00 IST
ಸಲ್ಮಾನ್‌ ರಶ್ದಿ
ಸಲ್ಮಾನ್‌ ರಶ್ದಿ   

ನವದೆಹಲಿ: ಲೇಖಕ ಸಲ್ಮಾನ್ ರಶ್ದಿ ಅವರ ‘ಸಟಾನಿಕ್ ವರ್ಸಸ್‌’ ಪುಸ್ತಕವು 36 ವರ್ಷಗಳ ಬಳಿಕ ಮತ್ತೊಮ್ಮೆ ಭಾರತದ ಪುಸ್ತಕ ಜಗತ್ತನ್ನು ಹೊಕ್ಕಿದೆ. ರಾಜೀವ್‌ ಗಾಂಧಿ ಅವರ ಸರ್ಕಾರವಿದ್ದ ಅವಧಿಯಲ್ಲಿ ಈ ಪುಸ್ತಕಕ್ಕೆ ನಿಷೇಧ ಹೇರಲಾಗಿತ್ತು.  

‘ರಶ್ದಿ ಅವರು ಇಸ್ಲಾಂ ಅನ್ನು ಅವಹೇಳನ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿ ಜಗತ್ತಿನ್ನೆಲ್ಲೆಡೆ ಮುಸ್ಲಿಂ ಸಂಘಟನಗೆಳು ಈ ಪುಸ್ತಕ ಕುರಿತು ಭಾರಿ ವಿರೋಧ ಮಾಡಿದ್ದರು. ಈಗ ಕೆಲವು ದಿನಗಳಿಂದ ಈ ಪುಸ್ತಕವು ದೆಹಲಿ ಬಾರಿಸನ್ಸ್‌ ಪುಸ್ತಕ ಮಳಿಗೆಯಲ್ಲಿ ಮಾರಾಟವಾಗುತ್ತಿದೆ.

‘ಕೆಲವು ದಿನಗಳಿಂದ ನಾವು ಈ ಪುಸ್ತಕವನ್ನು ಮಾರಾಟ ಮಾಡುತ್ತಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ’ ಎಂದು ಬಾರಿಸನ್ಸ್‌ ಪುಸ್ತಕ ಮಳಿಗೆ ಹೇಳಿದೆ. ₹1,999ಕ್ಕೆ ಪುಸ್ತಕವು ಮಾರಾಟವಾಗುತ್ತಿದೆ. ಇಷ್ಟೊಂದು ದೊಡ್ಡ ಮೊತ್ತದ ಕುರಿತು ಕೆಲ ಪುಸ್ತಕ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜೀವ್‌ ಗಾಂಧಿ ಅವರ ಸರ್ಕಾರವು ಪುಸ್ತಕಕ್ಕೆ ನಿಷೇಧ ಹೇರಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್‌ ಇದೇ ನವೆಂಬರ್‌ನಲ್ಲಿ ಮುಕ್ತಾಯ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.