ADVERTISEMENT

ಮರಣದಂಡನೆ: ಮೂವರನ್ನು ಖುಲಾಸೆಗೊಳಿಸಿದ ‘ಸುಪ್ರೀಂ’

ಚಾವ್ಲಾ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ

ಪಿಟಿಐ
Published 7 ನವೆಂಬರ್ 2022, 14:20 IST
Last Updated 7 ನವೆಂಬರ್ 2022, 14:20 IST
   

ನವದೆಹಲಿ: 2012 ರಲ್ಲಿ ದೆಹಲಿಯ ಛಾವ್ಲಾ ಪ್ರದೇಶದಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮೂವರನ್ನು ಸುಪ್ರೀಂ ಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ.‌

ಮೂವರು ಪುರುಷರು 2012ರ ಫೆಬ್ರುವರಿಯಲ್ಲಿ ಯುವತಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆ ಮಾಡಿದ್ದರು. ಅಪಹರಣಗೊಂಡ ಮೂರು ದಿನಗಳ ನಂತರ ಆಕೆಯ ವಿರೂಪಗೊಂಡ ದೇಹ ಪತ್ತೆಯಾಗಿತ್ತು.

2014 ರಲ್ಲಿ, ವಿಚಾರಣಾ ನ್ಯಾಯಾಲಯ ಮೂವರಿಗೆ ಮರಣದಂಡನೆ ವಿಧಿಸಿತ್ತು.ನಂತರ ಈ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿಹಿಡಿದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.