ADVERTISEMENT

ಮೂರು ಹೈಕೋರ್ಟ್‌ಗಳ ನ್ಯಾಯಮೂರ್ತಿ ಹುದ್ದೆ: 17 ಜನರ ಹೆಸರು ಶಿಫಾರಸು

ಮದ್ರಾಸ್‌ ಹೈಕೋರ್ಟ್‌ ಸಿ.ಜೆ ಆಗಿ ನ್ಯಾ.ಭಂಡಾರಿ ಹೆಸರು ಶಿಫಾರಸು

ಪಿಟಿಐ
Published 31 ಜನವರಿ 2022, 12:14 IST
Last Updated 31 ಜನವರಿ 2022, 12:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನ್ಯಾಯಮೂರ್ತಿ ಮುನೀಶ್ವರ್‌ ನಾಥ್‌ ಭಂಡಾರಿ ಅವರನ್ನುಮದ್ರಾಸ್‌ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿರುವಸುಪ್ರೀಂಕೋರ್ಟ್‌ ಕೊಲಿಜಿಯಂ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಒರಿಸ್ಸಾ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಾಗಿ ನೇಮಿಸಲು 17 ಹೆಸರುಗಳನ್ನು ಶಿಫಾರಸು ಮಾಡಿದೆ.

‌ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ಹಿರಿಯ ನ್ಯಾಯಮೂರ್ತಿಗಳಾದ ಯು.ಯು.ಲಲಿತ್ ಮತ್ತು ಎ.ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ಕೊಲಿಜಿಯಂ 2021 ಡಿಸೆಂಬರ್ 14 ಮತ್ತು 2022ರ ಜನವರಿ 29 ರಂದು ಚರ್ಚೆ ನಡೆಸಿ ಈ ಶಿಫಾರಸು ಮಾಡಲಾಗಿದೆ ಎಂದುಸುಪ್ರೀಂಕೋರ್ಟ್‌ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.

ನ್ಯಾಯಮೂರ್ತಿ ಭಂಡಾರಿ ಅವರು ರಾಜಸ್ಥಾನ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದು, ಅವರು ಮದ್ರಾಸ್‌ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ಮೂರು ಹೈಕೋರ್ಟ್‌ಗಳಿಗೆ ಶಿಫಾರಸು ಮಾಡಿರುವ 17 ನ್ಯಾಯಮೂರ್ತಿಗಳ ಹೆಸರುಗಳ ಪೈಕಿ ಏಳು ವಕೀಲರ ಹೆಸರನ್ನು ಆಂಧ್ರ ಪ್ರದೇಶದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಿಸಲು ಕೊಲಿಜಿಯಂ ಶಿಫಾರಸು ಮಾಡಿದೆ. ಅವರೆಂದರೆ–ಕೊನಕಂತಿ ಶ್ರೀನಿವಾಸ ರೆಡ್ಡಿ, ಗನ್ನಮನೇನಿ ರಾಮಕೃಷ್ಣ ಪ್ರಸಾದ್, ವೆಂಕಟೇಶ್ವರಲು ನಿಮ್ಮಗಡ್ಡ, ತರಳದ ರಾಜಶೇಖರ್ ರಾವ್, ಸತ್ತಿ ಸುಬ್ಬಾ ರೆಡ್ಡಿ, ರವಿ ಚೀಮಲಪತಿ, ಮತ್ತು ವಡ್ಡಿಬೋಯನ ಸುಜಾತ.

ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಆರು ಹೆಸರುಗಳನ್ನು ಕೊಲಿಜಿಯಂ ಶಿಫಾರಸು ಮಾಡಿದೆ. ಈ ಪೈಕಿ ಮೂವರು ವಕೀಲರು ಹಾಗೂ ಮೂವರು ನ್ಯಾಯಾಂಗ ಅಧಿಕಾರಿಗಳಾಗಿದ್ದಾರೆ. ವಕೀಲರ ಪೈಕಿ ಮಣಿಂದರ್‌ ಸಿಂಗ್ ಭಠ್ಟಿ,ದ್ವಾರಕಾ ಧೀಶ್ ಬನ್ಸಾಲ್ ಮತ್ತು ಮಿಲಿಂದ್ ರಮೇಶ್ ಫಡ್ಕೆ ಅವರ ಹೆಸರು ಶಿಫಾರಸು ಆಗಿದ್ದರೆ, ನ್ಯಾಯಾಂಗ ಅಧಿಕಾರಿಗಳ ಪೈಕಿಅಮರ್ ನಾಥ್ ಕೇಶರವಾಣಿ, ಪ್ರಕಾಶ್ ಚಂದ್ರ ಗುಪ್ತಾ ಮತ್ತು ದಿನೇಶ್ ಕುಮಾರ್ ಪಲಿವಾಲ್ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ.

ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ ಅಂಗೀಕರಿಸಿದರೆ ಒರಿಸ್ಸಾ ಹೈಕೋರ್ಟ್‌ಗೂ ನಾಲ್ವರು ನ್ಯಾಯಮೂರ್ತಿಗಳು ನೇಮಕವಾಗಲಿದ್ದಾರೆ. ವಕೀಲರಾದವಿ. ನರಸಿಂಗ್, ಸಂಜಯ್ ಕುಮಾರ್ ಮಿಶ್ರಾ, ಬಿರಾಜ ಪ್ರಸನ್ನ ಶತಪತಿ, ಮತ್ತು ರಾಮನ್ ಮುರಹರಿ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.