ಪ್ರಾತಿನಿಧಿಕಚ ಚಿತ್ರ
ನವದೆಹಲಿ: ನ್ಯಾಯಾಲಯಗಳ ಆಡಳಿತಾಧಿಕಾರಿಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿ ನಿಯಮಗಳನ್ನು ರಚಿಸಬೇಕು ಇಲ್ಲವೇ ಹಾಲಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಅನುಮೋದನೆಗಾಗಿ ಇವುಗಳನ್ನು ಸಂಬಂಧಿಸಿದ ರಾಜ್ಯಗಳಿಗೆ ಮೂರು ತಿಂಗಳ ಒಳಗಾಗಿ ಸಲ್ಲಿಸುವಂತೆ ಎಲ್ಲ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಮುಖ್ಯನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಆಗಸ್ಟೀನ್ ಜಾರ್ಜ್ ಮಸೀಹ್ ಹಾಗೂ ಕೆ.ವಿನೋದಚಂದ್ರನ್ ಅವರು ಇದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
13ನೇ ಹಣಕಾಸು ಆಯೋಗದ ಶಿಫಾರಸಿನಂತೆ, ನ್ಯಾಯಾಧೀಶರು/ನ್ಯಾಯಮೂರ್ತಿಗಳಿಗೆ ಆಡಳಿತಕ್ಕೆ ಸಂಬಂಧಿಸಿ ನೆರವು ನೀಡುವುದಕ್ಕಾಗಿ ಈ ಹುದ್ದೆಗಳನ್ನು ಸೃಜಿಸಲಾಗಿದೆ. ಜಿಲ್ಲಾ ಮತ್ತು ಹೈಕೋರ್ಟ್‌ಗಳಲ್ಲಿ ‘ನ್ಯಾಯಾಲಯ ಆಡಳಿತಾಧಿಕಾರಿ’ಗಳನ್ನು ನೇಮಕ ಮಾಡಲಾಗುತ್ತದೆ.
‘ತಮ್ಮ ಅಗತ್ಯಗಳಿಗೆ ತಕ್ಕಂತೆ ನಿಯಮಗಳನ್ನು ಮಾರ್ಪಡಿಸಲು ಇಲ್ಲವೇ ಬದಲಾವಣೆ ಮಾಡಲು ಹೈಕೋರ್ಟ್‌ಗಳು ಹಾಗೂ ರಾಜ್ಯ ಸರ್ಕಾರಗಳು ಸ್ವತಂತ್ರ’ ಎಂದು ನ್ಯಾಯಪೀಠ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.