ನವದೆಹಲಿ:ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪರಿಷ್ಕೃತ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನೋಂದಣಿ, ಅಹವಾಲು ಮತ್ತು ಆಕ್ಷೇಪಣಾ ಅರ್ಜಿ ಸಲ್ಲಿಸಲು ಡಿಸೆಂಬರ್ 15ರವರೆಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಿದೆ.
ಈ ಹಿಂದೆ ಐದು ದಾಖಲಾತಿ ಒದಗಿಸಿದರೂ, ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆಅಸ್ಸಾಂ ಎನ್‌ಆರ್‌ಸಿ ಸಂಯೋಜಕರು ನಿರಾಕರಿಸಿದ್ದರು.ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ, ಎನ್‌ಆರ್‌ಸಿ 1951, 1966ರ ಮತದಾರರ ಪಟ್ಟಿ, 1971ರ ವರೆಗಿನ ನಿರಾಶ್ರಿತರ ಪ್ರಮಾಣಪತ್ರ, 1971ರ ರೇಷನ್‌ಕಾರ್ಡ್ ನೀಡಿ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದೆ.
ಎನ್‌ಆರ್‌ಸಿ ಸೇರ್ಪಡೆಗೆ ಹಕ್ಕುದಾರರು ಸಲ್ಲಿಸುವ ಅರ್ಜಿದಾರರ ದಾಖಲೆಗಳ ಪರಿಶೀಲನೆಗೆ ಜನವರಿ 15ರಿಂದ ಫೆಬ್ರುವರಿ 1 ರ ತನಕ ಕಾಲ ನಿಗದಿಪಡಿಸಿದೆ.
ಈ ಹಿಂದೆ,1971ರ ಮಾರ್ಚ್ 24ರ ಮಧ್ಯರಾತ್ರಿ ತನಕ ಸರ್ಕಾರದ ವಿವಿಧ ಇಲಾಖೆ ಹಾಗೂ ಸಂಸ್ಥೆಗಳು ನೀಡಿದ ಪ್ರಮಾಣಪತ್ರ ಹಾಗೂ ದಾಖಲೆಗಳಿದ್ದರೆ ಹೆಸರು ಸೇರ್ಪಡೆ ಹಾಗೂ ತೆಗೆಯಲುಎನ್‌ಆರ್‌ಸಿ ಅವಕಾಶ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.