ADVERTISEMENT

ಸಾಲದ ಕಂತು ಮುಂದೂಡಿಕೆಗೆ ಮನವಿ; ಶಿಶು ವಿಹಾರಗಳ ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಪಿಟಿಐ
Published 8 ಅಕ್ಟೋಬರ್ 2021, 8:16 IST
Last Updated 8 ಅಕ್ಟೋಬರ್ 2021, 8:16 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ಶಿಶು ವಿಹಾರಗಳನ್ನು (ಪ್ಲೇ ಸ್ಕೂಲ್‌) ನಡೆಸುತ್ತಿರುವ ಸಂಸ್ಥೆಗಳು ಪಡೆದಿರುವ ‘ನಿರ್ದಿಷ್ಟ ಅವಧಿ ಸಾಲಗಳ ಬಡ್ಡಿರಹಿತ ಮರುಪಾವತಿ ಅವಧಿ ವಿಸ್ತರಣೆ ಹಾಗೂ ಕೊರೊನಾ ಅವಧಿ ಮುಗಿಯುವ ತನಕ ಸಾಲದ ಕಂತು ಮುಂದೂಡುವಂತೆ ಆರ್‌ಬಿಐಗೆ ನಿರ್ದೇಶನ ನೀಡಲು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರ ಪೀಠವು ಅರ್ಜಿದಾರರಿಗೆ ಈ ಸಂಬಂಧ ಆರ್‌ಬಿಐ ಅನ್ನು ಸಂಪರ್ಕಿಸಬಹುದು ಎಂದು ಹೇಳಿತು.

‘ನಾವು ಈ ರಿಟ್ ಅರ್ಜಿಯನ್ನು ಸ್ವೀಕರಿಸಲು ಬಯಸುವುದಿಲ್ಲ. ಆದಾಗ್ಯೂ, ಅರ್ಜಿದಾರರು ಈ ಕುರಿತು ಆರ್‌ಬಿಐ ಅನ್ನು ಸಂಪರ್ಕಿಸಲು ಸ್ವತಂತ್ರರಿದ್ದಾರೆ. ಕಾನೂನಿನ ಪ್ರಕಾರ ನಿಮ್ಮ ಮನವಿಯನ್ನು ಆರ್‌ಬಿಐ ಸೂಕ್ತವಾಗಿ ಪರಿಶೀಲಿಸಿ ನಿರ್ಧರಿಸಬಹುದು’ ಎಂದು ಪೀಠ ತಿಳಿಸಿತು.

ADVERTISEMENT

ಇಂಡಿಯನ್ ಕೌನ್ಸಿಲ್ ಆಫ್ ಅರ್ಲಿ ಚೈಲ್ಡ್‌ಹುಡ್‌ ಎಜುಕೇಟರ್ಸ್‌ ಅಂಡ್‌ ಇನ್‌ಸ್ಟಿಟ್ಯೂಷನ್‌ (ಐಸಿಇಸಿಇಐ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು.

‘ಸಾಮಾನ್ಯ ಶಾಲೆಗಳಂತೆ, ನಾವು ಆನ್‌ಲೈನ್ ಮೂಲಕ ಶಿಕ್ಷಣವನ್ನು ಪುಟಾಣಿ ಮಕ್ಕಳಿಗೆ ಹೇಳಿಕೊಡಲು ಆಗದು. ಇದರಿಂದಾಗಿ ನಮ್ಮ ಸಂಸ್ಥೆಗಳಿಗೆ ಆದಾಯವೇ ಇಲ್ಲವಾಗಿದೆ’ ಎಂದು ಅರ್ಜಿದಾರರು ಮನವಿಯಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.