ADVERTISEMENT

ಅಮಾನತು ಪ್ರಶ್ನಿಸಿ ಬಿಜೆಪಿಯ 12 ಶಾಸಕರ ಅರ್ಜಿ; ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ಮಹಾರಾಷ್ಟ್ರ

ಪಿಟಿಐ
Published 19 ಜನವರಿ 2022, 11:08 IST
Last Updated 19 ಜನವರಿ 2022, 11:08 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಮಹಾರಾಷ್ಟ್ರ ವಿಧಾನಸಭೆಯಿಂದ ತಮ್ಮನ್ನು ಒಂದು ವರ್ಷ ಕಾಲ ಅಮಾನತುಗೊಳಿಸಿದ್ದನ್ನು ಪ್ರಶ್ನಿಸಿ ಬಿಜೆಪಿಯ 12 ಶಾಸಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂಕೋರ್ಟ್‌ ಬುಧವಾರ ಕಾಯ್ದಿರಿಸಿತು.

ನ್ಯಾಯಮೂರ್ತಿ ಎ.ಎಂ.ಖಾನ್ವೀಲ್ಕರ್ ನೇತೃತ್ವದ ಮೂವರು ಸದಸ್ಯರನ್ನು ಒಳಗೊಂಡ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ವಾರದ ಒಳಗಾಗಿ ಕಕ್ಷಿದಾರರು ಪ್ರತಿಕ್ರಿಯೆ ಸಲ್ಲಿಸುವಂತೆಯೂ ನ್ಯಾಯಪೀಠ ಆದೇಶಿಸಿತು.

ADVERTISEMENT

ಅಮಾನತುಗೊಂಡ ಶಾಸಕರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ, ‘ವಿಧಾನಸಭೆಯಿಂದಸುದೀರ್ಘ ಅವಧಿಗೆ ಅಮಾನತು ಮಾಡುವುದು, ಉಚ್ಚಾಟನೆಗಿಂತಲೂ ಕೆಟ್ಟದ್ದು’ ಎಂದು ವಾದಿಸಿದರು.

ಇತರ ಶಾಸಕರ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹ್ಟಗಿ, ‘ಶಾಸಕರನ್ನು ಒಂದು ವರ್ಷ ಕಾಲ ಅಮಾನತು ಮಾಡಿರುವುದು ತರ್ಕಹೀನ ನಿರ್ಧಾರ’ ಎಂದು ಹೇಳಿದರು.

ಸದನದ ಒಳಗೆ ಮತ್ತು ಹೊರಗೆ ಸಭಾಧ್ಯಕ್ಷರ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ, ಕಳೆದ ವರ್ಷ ಜುಲೈ 5ರಂದು ಶಾಸಕರನ್ನು ಅಮಾನತು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.