ADVERTISEMENT

ದೇಶದ ಮೊದಲ ವಿಜ್ಞಾನ ವೆಬ್‌ ಪೋರ್ಟಲ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2018, 15:37 IST
Last Updated 8 ಅಕ್ಟೋಬರ್ 2018, 15:37 IST
ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಮಾತನಾಡಿದರು. -ಪ್ರಜಾವಾಣಿ ವಾರ್ತೆ
ಸಮಾರೋಪ ಸಮಾರಂಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಹರ್ಷವರ್ಧನ್ ಮಾತನಾಡಿದರು. -ಪ್ರಜಾವಾಣಿ ವಾರ್ತೆ   

ಲಖನೌ: ದೇಶದ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಮೊದಲ ವಿಜ್ಞಾನ ವೆಬ್ ಪೋರ್ಟಲ್ ಅನ್ನು ವಿಜ್ಞಾನ ಭಾರತಿ ಆರಂಭಿಸಿದೆ.

ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ಸೋಮವಾರ ಪೋರ್ಟಲ್‌ಗೆ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳು ಮಾತ್ರವಲ್ಲದೆ ವಿಜ್ಞಾನದ ಶಿಕ್ಷಕರು ಇದರ ಉಪಯೋಗ ಪಡೆದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಅನುಕೂಲವಾಗುತ್ತದೆ ಎಂದು ವಿಜ್ಞಾನ ಭಾರತಿ ಅಧ್ಯಕ್ಷ ವಿಜಯ್ ಬಾಟ್ಕರ್ ತಿಳಿಸಿದರು.

ADVERTISEMENT

www.scienceindiain ವೆಬ್‌ ಪೋರ್ಟಲ್‌ ವಿಳಾಸವಾಗಿದ್ದು, ಇದರ ಬಳಕೆಯನ್ನು ಎಲ್ಲ ವಿಜ್ಞಾನ ಆಸಕ್ತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದರ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಬಹುದು. ಅಲ್ಲದೆ, ಹೊಸ ಐಡಿಯಾಗಳು, ಸಂಶೋಧನೆಗಳು, ಹೊಸ ವಿಷಯಗಳನ್ನು ಹಂಚಿಕೊಳ್ಳಬಹುದು.ಅಲ್ಲದೆ, ದೇಶದ ಪ್ರಮುಖ ವಿಜ್ಞಾನಿಗಳ ಲಿಂಕ್ ಕೊಡಲಾಗುತ್ತದೆ. ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಅವಕಾಶವೂ ಇದೆ. ಜ್ಞಾನಕ್ಕಾಗಿ ಹಂಬಲಿಸುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ವೇದಿಕೆ ಆಗುತ್ತದೆ' ಎಂದರು.

ಇದರಿಂದಾಗಿ ಆಗುವ ಮತ್ತೊಂದು ಪ್ರಯೋಜನವೆಂದರೆ ದೇಶದ ಎಲ್ಲ ಪ್ರತಿಭಾವಂತ ವಿಜ್ಞಾನ ಆಸಕ್ತ ವಿದ್ಯಾರ್ಥಿಗಳನ್ನು ಒಂದೆ ಕಡೆ ಸೇರಿಸಲು ಇದು ಉತ್ತಮ ವೇದಿಕೆ ಎಂದರು.

ನಾಲ್ಕು ದಿನಗಳ ಉತ್ಸವಕ್ಕೆ ತೆರೆ: ನಾಲ್ಕು ದಿನಗಳ ವಿಜ್ಞಾನ ಉತ್ಸವ ಸೋಮವಾರ ಕೊನೆಗೊಂಡಿತು. ಈ ಉತ್ಸವದಲ್ಲಿ ದೇಶದ ವಿವಿಧ ರಾಜ್ಯಗಳ 12,500 ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು ಭಾಗವಹಿಸಿದ್ದರು.

ಸಮಾರೋಪದಲ್ಲಿ ಭಾಗಹಿಸಿದ್ದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಾತನಾಡಿ, ‘ಭತ್ತದ ಹೊಟ್ಟು, ಬಿದಿರಿನಿಂದ ಜೈವಿಕ ಇಂಧನ ತಯಾರಿಸುಬಹುದು. ಕರ್ನಾಟಕದಲ್ಲಿ ಈ ಪ್ರಯತ್ನ ನಡೆದಿದೆ’ ಎಂದರು.

ಟಾಯ್ಲೆಟ್ ನೀರಿನಿಂದ ಮಿಥೆನಾಲ್:‘ಮುಂಬೈನಲ್ಲಿ ಮಿಥೆನಲ್‌ನಿಂದ ಬಸ್‌ಗಳನ್ನು ನಡೆಸುವ ಪ್ರಯೋಗ ಮುಂಬೈ, ಗುವಾಹಟಿಯಲ್ಲಿ ಆರಂಭಿಸಲಾಗುವುದು. ವೋಲ್ವೋ ವಾಹನ ಕಂಪನಿ ಇದಕ್ಕೆ ಪೂರಕ ಎಂಜಿನ್ ತಯಾರಿಸಿ ಕೊಡಲಿದೆ.ಪ್ರತಿ ಲೀಟರ್ ಬಯೊ ಮಿಥೆನಾಲ್ ದರ ₹22 ಅತ್ಯಂತ ಕಡಿಮೆ ವೆಚ್ಚದ ಇಂಧನ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.