ADVERTISEMENT

ಒಳ ಉಡುಪು ತೆಗೆಸಿದ ಪ್ರಕರಣ: ಕೇರಳ ವಿದ್ಯಾರ್ಥಿನಿಯರಿಗೆ ಸೆ. 4ರಂದು ನೀಟ್ ಪರೀಕ್ಷೆ

ಒಳ ಉಡುಪು ತೆಗೆಸಿ ಅಪಮಾನಿಸಿದ್ದ ಪ್ರಕರಣ

ಪಿಟಿಐ
Published 27 ಆಗಸ್ಟ್ 2022, 21:12 IST
Last Updated 27 ಆಗಸ್ಟ್ 2022, 21:12 IST
ಒಳ ಉಡುಪು ತೆಗೆಸಿದ ಪ್ರಕರಣ ಕೇರಳದ ವಿದ್ಯಾರ್ಥಿನಿಯರಿಗೆ ಸೆ. 4ರಂದು ಮರು ಪರೀಕ್ಷೆ
ಒಳ ಉಡುಪು ತೆಗೆಸಿದ ಪ್ರಕರಣ ಕೇರಳದ ವಿದ್ಯಾರ್ಥಿನಿಯರಿಗೆ ಸೆ. 4ರಂದು ಮರು ಪರೀಕ್ಷೆ   

ನವದೆಹಲಿ/ಕೊಲ್ಲಂ: ಕೇರಳದ ಕೊಲ್ಲಂ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಯ ಕೇಂದ್ರದಲ್ಲಿ ಕಳೆದ ತಿಂಗಳು ‘ನೀಟ್‌’ ಪರೀಕ್ಷೆಬರೆದವಿದ್ಯಾರ್ಥಿನಿಯರಿಗೆ ಸೆಪ್ಟೆಂಬರ್‌ 4ರಂದು ಮರುಪರೀಕ್ಷೆನಡೆಸಲು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಜುಲೈ 17ರಂದು ‘ನೀಟ್‌’ ಪರೀಕ್ಷೆ ಬರೆಯಲು ಕೊಲ್ಲಂನ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿನಿಯರಿಗೆ, ಪರೀಕ್ಷೆಗೆ ಹಾಜರಾಗುವ ಮುನ್ನ ಬಲವಂತವಾಗಿ ಒಳ ಉಡುಪುಗಳನ್ನು ತೆಗೆಸಲಾಗಿತ್ತು ಎಂಬ ಆರೋಪ ವ್ಯಕ್ತವಾಗಿತ್ತು. ಈ ಕುರಿತು ದೂರು ದಾಖಲಾಗಿತ್ತು.

ಕೊಲ್ಲಂ ಪರೀಕ್ಷಾ ಕೇಂದ್ರದಲ್ಲಿ ನೊಂದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ 4ರಂದು ನಡೆಯುವ ನೀಟ್‌ ಮರು ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದೇ ವೇಳೆ ರಾಜಸ್ಥಾನ ಮತ್ತು ಮಧ್ಯ ಪ್ರದೇಶದ ತಲಾ ಎರಡು ಕೇಂದ್ರಗಳು ಹಾಗೂ ಉತ್ತರ ಪ್ರದೇಶದ ಒಂದು ಪರೀಕ್ಷಾ ಕೇಂದ್ರದಲ್ಲೂ ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಕೊಲ್ಲಂನಲ್ಲಿ ಪರೀಕ್ಷೆ ಬರೆದ 17 ವರ್ಷದ ವಿದ್ಯಾರ್ಥಿನಿಯೊಬ್ಬರ ತಂದೆ ಈ ಕುರಿತು ದೂರು ನೀಡಿದ್ದರು. ಪರೀಕ್ಷಾ ಕೇಂದ್ರದಲ್ಲಿ ಆದ ಅವಮಾನದಿಂದ ಮಗಳಿಗೆ ಮಾನಸಿಕ ಆಘಾತವಾಗಿದೆ ಎಂದು ಅವರು ದೂರಿದ್ದರು.

ಈ ಕುರಿತು ವಿಚಾರಣೆಗೆ ಎನ್‌ಟಿಎ ಸಮಿತಿಯನ್ನೂ ರಚಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪರೀಕ್ಷಾ ಕೇಂದ್ರದ ಐವರು ಮಹಿಳಾ ಸಿಬ್ಬಂದಿ ಸೇರಿದಂತೆ ಏಳು ಜನರನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.