ADVERTISEMENT

ಲೈಂಗಿಕ ದೌರ್ಜನ್ಯ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2018, 19:46 IST
Last Updated 20 ಡಿಸೆಂಬರ್ 2018, 19:46 IST

ಮುಜ‌ಫ್ಫರ್‌ಪುರ/ನವದೆಹಲಿ: ಬಿಹಾರದ ಮುಜಫ್ಫರ್‌ಪುರದ ಬಾಲಿಕಾ ಗೃಹದ 34 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸುದೀರ್ಘ ಆರೋಪಪಟ್ಟಿಯನ್ನು ಪೋಕ್ಸೊ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಕೇಂದ್ರವನ್ನು ನಡೆಸುತ್ತಿದ್ದ ‌ಸ್ವಯಂ ಸೇವಾ ಸಂಸ್ಥೆಯ ಮಾಲೀಕ ಬ್ರಿಜೇಶ್ ಠಾಕೂರ್ ಮತ್ತು ಇತರ 20 ಮಂದಿಯನ್ನು ಪಟ್ಟಿಯಲ್ಲಿ ಹೆಸರಿಸಲಾಗಿದೆ.

ನೂರಾರು ಪುಟಗಳಲ್ಲಿರುವ ಆರೋಪ ಪಟ್ಟಿಯ ಸಾರಾಂಶವನ್ನು ಸಿದ್ಧಪಡಿಸಿ ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ನ್ಯಾಯಾಧೀಶ ಆರ್‌.ಪಿ. ತಿವಾರಿ ಸಿಬಿಐ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಕ್ರಿಮಿನಲ್ ಪಿತೂರಿ, ಘೋರ ಅಪರಾಧಕ್ಕೆ ಸಜ್ಜುಗೊಂಡಿದ್ದ ಆರೋಪಗಳನ್ನು ಹೊರಿಸಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ. ಹತ್ಯೆಯಂತಹ ಗಂಭೀರ ಅಪರಾಧ, ಅತ್ಯಾಚಾರ ಪ್ರಕರಣಗಳನ್ನೂ ಮುಂದಿನ ಆರೋಪಪಟ್ಟಿಯಲ್ಲಿ ದಾಖಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.