
ಪಿಟಿಐ
ಪುಣೆ: ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಅದ್ವಿತೀಯ ಗೆಲುವಿಗೆ ಮಹಿಳಾ ಉದ್ಯಮಶೀಲತಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಮಹಿಳೆಯರಿಗೆ ಹಣ ವರ್ಗಾಯಿಸಲು ಚುನಾವಣಾ ಆಯೋಗ ಹೇಗೆ ಅವಕಾಶ ಮಾಡಿಕೊಟ್ಟಿತು’ ಎಂದು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಶನಿವಾರ ಪ್ರಶ್ನಿಸಿದರು.
‘ಬಿಹಾರದ ಮುಖ್ಯಮಂತ್ರಿ ನಿತೀಶ್ ಅವರು ನುಡಿದ ಭವಿಷ್ಯದಂತೆ ಫಲಿತಾಂಶ ಬಂದಿದೆ. ಈ ಚುನಾವಣೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಿದ್ದಾರೆ. ಅವರ ಖಾತೆಗಳಿಗೆ ₹10,000 ಜಮೆ ಮಾಡಿದ ಯೋಜನೆಯು ಎನ್‌ಡಿಎಗೆ ವರದಾನವಾಗಲಿದೆ ಎಂದು ನಾನು ಹಿಂದೆಯೇ ಭಾವಿಸಿದ್ದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಹೀಗೆ ಸರ್ಕಾರ ಚುನಾವಣಾ ವೇಳೆಯಲ್ಲಿ ಹಣ ಹಂಚಿದ್ದು ಸರಿಯೇ ಎಂಬುದನ್ನು ಆಯೋಗ ಯೋಚಿಸಬೇಕು. ಭವಿಷ್ಯದ ಚುನಾವಣೆಗಳಲ್ಲೂ ಬಿಹಾರ ಮಾದರಿ ಜಾರಿಯಾದರೆ ಹೇಗಾಗಬಹುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.