ADVERTISEMENT

ನಕಲಿ ಬೇಹುಗಾರಿಕೆ ಪ್ರಕರಣ: ಸಹ ಆರೋಪಿಯಾಗಿದ್ದ ಶರ್ಮಾ ನಿಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 18:43 IST
Last Updated 1 ನವೆಂಬರ್ 2018, 18:43 IST

ಬೆಂಗಳೂರು: ಇಸ್ರೊ ನಕಲಿ ಬೇಹುಗಾರಿಕೆ ಪ್ರಕರಣದ ಸಹ ಆರೋಪಿಯಾಗಿದ್ದ ಮಾಜಿ ಕಾರ್ಮಿಕ ಗುತ್ತಿಗೆದಾರ ಎಸ್‌.ಕೆ.ಶರ್ಮಾ ಗುರುವಾರ ನಿಧನರಾದರು.

ಅವರಿಗೆ 62 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಇಸ್ರೊ ವಿಜ್ಞಾನಿ ನಂಬಿ ನಾರಾಯಣ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಶರ್ಮಾ ಸೇರಿ ಒಟ್ಟು ಆರು ಮಂದಿಯನ್ನು ಸಹ ಆರೋಪಿಗಳನ್ನಾಗಿ ಮಾಡಲಾಗಿತ್ತು. ಬಳಿಕ ಬೇಹುಗಾರಿಕೆ ಆರೋಪವೇ ನಕಲಿ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತು.

ADVERTISEMENT

ರಾಕೆಟ್‌ ವಿನ್ಯಾಸಗಳನ್ನು ಮಾಲ್ಡೀವ್ಸ್‌ ಮೂಲಕ ಪಾಕಿಸ್ತಾನಕ್ಕೆ ಮಾರಿದ್ದಾರೆ ಎಂಬ ಸುಳ್ಳು ಆರೋಪದ ಮೇಲೆ ವಿಜ್ಞಾನಿ ಕೆ.ಚಂದ್ರಶೇಖರ್‌ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದರು. ಶರ್ಮಾ ಅವರು ಚಂದ್ರಶೇಖರ್‌ ಅವರ ಗೆಳೆಯರಾಗಿದ್ದರು.

ಸುಪ್ರೀಂ ಕೋರ್ಟ್‌ ಶರ್ಮಾ ಅವರನ್ನು 1998ರಲ್ಲಿ ದೋಷ ಮುಕ್ತಗೊಳಿಸಿ, ₹ 1ಲಕ್ಷ ಪರಿಹಾರ ನೀಡುವಂತೆ ಸೂಚಿಸಿತ್ತು. ಕೇರಳ ಸರ್ಕಾರ ಮತ್ತು ಪೊಲೀಸರ ವಿರುದ್ಧ ಶರ್ಮಾ ಮೊಕದ್ದಮೆ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.