ADVERTISEMENT

ಶಶಿ ತರೂರ್‌ಗೆ ಜಾಮೀನು

ಸುನಂದಾ ಪುಷ್ಕರ್‌ ಸಾವು ಪ್ರಕರಣ

ಪಿಟಿಐ
Published 7 ಜುಲೈ 2018, 12:29 IST
Last Updated 7 ಜುಲೈ 2018, 12:29 IST
ಶಶಿ ತರೂರ್‌
ಶಶಿ ತರೂರ್‌   

ನವದೆಹಲಿ: ಸುನಂದಾ ಪುಷ್ಕರ್‌ ಸಾವಿನ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಶಶಿ ತರೂರ್ ಅವರಿಗೆ ಇಲ್ಲಿನ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.

ತಿರುವನಂತಪುರದ ಸಂಸದರೂ ಆಗಿರುವ ತರೂರ್‌ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾದ ಅವರು, ಈಗಾಗಲೇ ತಾವು ಇದೇ 5 ರಂದು ಸೆಷನ್ಸ್‌ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿರುವುದಾಗಿ ತಿಳಿಸಿದರು.

ಸೆಷನ್ಸ್‌ ಕೋರ್ಟ್‌ ನಿರ್ದೇಶನದಂತೆ ಒಂದು ಲಕ್ಷ ಮೊತ್ತದ ಬಾಂಡ್‌ ಮತ್ತು ಇಷ್ಟೇ ಮೊತ್ತಕ್ಕೆ ವ್ಯಕ್ತಿಯೊಬ್ಬರನ್ನು ಖಾತರಿ ನೀಡುವಂತೆ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಸಮರ್ ವಿಶಾಲ್‌ ಹೇಳಿದರು. ಆನಂತರ ನಿರೀಕ್ಷಣಾ ಜಾಮೀನನ್ನು ರೆಗ್ಯುಲರ್ ಜಾಮೀನಾಗಿ ಪರಿವರ್ತಿಸಿದರು.

ADVERTISEMENT

ತರೂರ್ ಅವರು ಬಂಧನ ತಪ್ಪಿಸಿಕೊಳ್ಳಲು ಸೆಷನ್ಸ್‌ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.