ADVERTISEMENT

ಹೃದಯಾಘಾತ: ಶಿವಸೇನಾ ಶಾಸಕ ನಿಧನ

ಮುಂಬೈ ನಗರದ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್‌ ಲಟ್ಕೆ ಸಾವು

ಪಿಟಿಐ
Published 12 ಮೇ 2022, 16:32 IST
Last Updated 12 ಮೇ 2022, 16:32 IST
ಶಿವಸೇನಾ ಶಾಸಕ ರಮೇಶ್‌ ಲಟ್ಕೆ
ಶಿವಸೇನಾ ಶಾಸಕ ರಮೇಶ್‌ ಲಟ್ಕೆ   

ಮುಂಬೈ: ಶಿವಸೇನಾ ಶಾಸಕ ರಮೇಶ್‌ ಲಟ್ಕೆ (52) ಅವರು ದುಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಲಟ್ಕೆ ಕುಟುಂಬಸ್ಥರೊಂದಿಗೆ ದುಬೈಗೆ ಪ್ರವಾಸ ಹೋಗಿದ್ದರು. ಬುಧವಾರ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರ ಪಾರ್ಥಿವ ಶರೀರವನ್ನು ಗುರುವಾರ ಭಾರತಕ್ಕೆ ತರುವ ನಿರೀಕ್ಷೆ ಇದೆ.

ಲಟ್ಕೆ ಅವರು ಮುಂಬೈ ನಗರದ ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇದಕ್ಕೂ ಮೊದಲು ಬೃಹನ್‌ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಕಾರ್ಪೋರೇಟರ್ ಆಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.