ADVERTISEMENT

ಸಿದ್ಧಾರ್ಥ ಮಲ್ಯರಿಂದ ಕೃತಿ 2021ರ ಮೇನಲ್ಲಿ ಬಿಡುಗಡೆ

ಪಿಟಿಐ
Published 25 ಸೆಪ್ಟೆಂಬರ್ 2020, 10:54 IST
Last Updated 25 ಸೆಪ್ಟೆಂಬರ್ 2020, 10:54 IST

ನವದೆಹಲಿ: ಉದ್ಯಮಿ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ ಮಲ್ಯ ಈಗ ಲೇಖಕನಾಗಿ, ಪ್ರಕಾಶಕನಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ಮಾನಸಿಕ ಆರೋಗ್ಯ ಕುರಿತು ಕೃತಿ ರಚನೆಗೆ ಮುಂದಾಗಿರುವ ಅವರು ಇದೇ ಸಂದರ್ಭದಲ್ಲಿ ವೆಸ್ಟ್ ಲ್ಯಾಂಡ್ ಹೆಸರಿನ ಪ್ರಕಾಶನ ಸಂಸ್ಥೆಯನ್ನು ಘೋಷಿಸಿದ್ದಾರೆ.

ಸದ್ಯಕ್ಕೆ ‘conSIDer This’ ಎಂದು ಹೆಸರಿಸಲಾಗಿರುವ ಈ ಕೃತಿಯು ಅವರ ಇತ್ತೀಚಿನ ವೆಬ್ ಸರಣಿಗಳನ್ನು ಆರಿಸಿದ್ದಾಗಿದೆ. ಇಲ್ಲಿ ಅವರು ತಮ್ಮ ಮಾನಸಿಕ ತುಮುಲಗಳು ಹಾಗೂ ಅದರಿಂದ ಹೊರಬಂದ ಬಗೆಯನ್ನು ಹಂಚಿಕೊಂಡಿದ್ದಾರೆ. ಕೃತಿಯು 2021ರ ಮೇ ತಿಂಗಳಲ್ಲಿ ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ನಟ, ನಿರ್ಮಾಪಕನೂ ಆಗಿರುವ ಅವರು ಬ್ರಹ್ಮನ್ ನಾಮನ್ ಮತ್ತು ಬೆಸ್ಟ್ ಫೇಕ್ ಫ್ರೆಂಡ್ಸ್ ಚಿತ್ರಗಳಲ್ಲಿ ಭಾಗಿಯಾಗಿದ್ದರು. ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಪ್ರಕಟಿಸಲಾಗಿದ್ದ ಅವರ ವೆಬ್ ಸರಣಿಯ ಲೇಖನಗಳು ಅಸಂಖ್ಯ ಓದುಗರನ್ನು ಸೆಳೆದಿತ್ತು.

ADVERTISEMENT

‘ನಾನು ಸರಣಿಯನ್ನು ಈ ವರ್ಷದ ಆರಂಭದಲ್ಲಿ ಆರಂಭಿಸಿದಾಗ ನನ್ನ ಉದ್ದೇಶ, ನನ್ನದೇ ನೆನಪುಗಳನ್ನು ಹಂಚಿಕೊಂಡು ಜನರಿಗೆ ಇಂಥ ತುಮುಲಗಳಿಂದ ಹೊರಬರಲು ನೆರವಾಗುವುದೇ ಆಗಿತ್ತು. ಲೇಖನಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯು ಈಗ ಅದು ಪುಸ್ತಕದ ರೂಪದಲ್ಲಿ ಹೊರಬರಲು ಪ್ರೇರೇಪಣೆಯಾಗಿದೆ’ ಎಂದು 33 ವರ್ಷದ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.