ADVERTISEMENT

ಖ್ಯಾತ ಸಿತಾರ್‌ ವಾದಕ ಪ್ರತೀಕ್ ಚೌಧರಿ ನಿಧನ

ಪಿಟಿಐ
Published 7 ಮೇ 2021, 10:18 IST
Last Updated 7 ಮೇ 2021, 10:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಖ್ಯಾತ ಸಿತಾರ್ ವಾದಕ ಪ್ರತೀಕ್ ಚೌಧರಿ(49) ಅವರು ಕೊರೊನಾ ಸಂಬಂಧಿ ಆರೋಗ್ಯ ಸಮಸ್ಯೆಯಿಂದಾಗಿ ಶುಕ್ರವಾರ ನಿಧನರಾಗಿದ್ದಾರೆ.

ಪ್ರತೀಕ್ ತಂದೆ ಖ್ಯಾತ ಸಿತಾರ್‌ ವಾದಕ ಪಂಡಿತ್‌ ದೇವವ್ರತ ಚೌಧರಿ ಅವರು ಕಳೆದ ಶನಿವಾರ ನಿಧನರಾಗಿದ್ದರು. ಮೃತರಿಗೆ ಪತ್ನಿ ರುನಾ ಮತ್ತು ಪುತ್ರರಾದ ರಾಯಣ ಮತ್ತು ಅಧಿರಾಜ್ ಇದ್ದಾರೆ.

ಸಂಗೀತ ಕ್ಷೇತ್ರದ ಇತಿಹಾಸಕಾರ ಪವಾಜ್‌ ಝಾ ಅವರ ಪ್ರಕಾರ, ಪ್ರತೀಕ್ ಅವರನ್ನು ಕಳೆದ ಗುರುವಾರ ಗುರು ತೇಜ್‌ ಬಹದ್ದೂರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ADVERTISEMENT

‘ಪ್ರತೀಕ್ ಚೌಧರಿ, ಭರವಸೆಯ ಪ್ರತಿಭೆ. ಕೋವಿಡ್ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ಐಸಿಯುನಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದರು. ಗುರುವಾರ ಅವರು ತಮ್ಮ ತಂದೆಯೊಂದಿಗೆ ಅನಂತ ದೆಡಗೆ ಸಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ‘ ಎಂದು ಝಾ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.