ADVERTISEMENT

ಚೀನಾದ ಪೂರ್ವ ಗಡಿಯಲ್ಲಿ ಅನಿಶ್ಚಿತ ಸ್ಥಿತಿ: ಲೆಫ್ಟಿನಂಟ್ ಜನರಲ್ ಆರ್‌.ಪಿ.ಕಲಿಟ

ಪಿಟಿಐ
Published 27 ಜನವರಿ 2023, 16:11 IST
Last Updated 27 ಜನವರಿ 2023, 16:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲ್ಕತ್ತ: ಚೀನಾ ಜೊತೆಗಿನ ಪೂರ್ವ ಭಾಗದ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಗಡಿ ಗುರುತು ಆಗದಿರುವ ಕಾರಣ ಅನಿಶ್ಚಿತ ಸ್ಥಿತಿ ಇದೆ ಎಂದು ಸೇನೆಯ ಪೂರ್ವ ಕಮಾಂಡ್‌ನ ಲೆಫ್ಟಿನಂಟ್ ಜನರಲ್ ಆರ್‌.ಪಿ.ಕಲಿಟ ಹೇಳಿದ್ದಾರೆ.

ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ವಲಯದಲ್ಲಿ ಇರುವ ವಾಸ್ತವ ಗಡಿ ರೇಖೆಯ ಉಸ್ತುವಾರಿ ನಿರ್ವಹಣೆಯ ಜವಾಬ್ದಾರಿಯು ಪೂರ್ವ ಕಮಾಂಡ್‌ನದ್ದಾಗಿದೆ.

ಭಾರತ ಮತ್ತು ಚೀನಾ ನಡುವಿನ ಗಡಿ ನಿಗದಿ ಆಗದಿರುವುದೇ ಸಮಸ್ಯೆಗೆ ಕಾರಣವಾಗಿದೆ. ವಾಸ್ತವ ಗಡಿ ರೇಖೆ ಕುರಿತಂತೆ ವಿವಿಧ ಗ್ರಹಿಕೆಗಳಿವೆ. ಪ್ರಸ್ತುತ ಸ್ಥಿರವಾಗಿದ್ದರೂ ಪರಿಸ್ಥಿತಿ ಅನಿಶ್ಚಿತವಾಗಿಯೇ ಇದೆ ಎಂದು ಅವರು ಮಾಧ್ಯಮ ಸಂವಾದದಲ್ಲಿ ಹೇಳಿದರು.

ADVERTISEMENT

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಸೆಂಬರ್ 13ರಂದು ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದು, ಪೂರ್ವ ಭಾಗದಲ್ಲಿ ಗಡಿ ರೇಖೆಯ ವಸ್ತುಸ್ಥಿತಿ ಬದಲಿಸಲು ಚೀನಾ ಸೇನೆಯು ಯತ್ನಿಸುತ್ತಿದೆ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.