ADVERTISEMENT

ಮನೆ ಯಜಮಾನನೇ ಕೊಂದನೆ? ಗಂಡ–ಹೆಂಡತಿ, ನಾಲ್ವರು ಮಕ್ಕಳು ಶವವಾಗಿ ಪತ್ತೆ

ಪಿಟಿಐ
Published 21 ನವೆಂಬರ್ 2022, 9:49 IST
Last Updated 21 ನವೆಂಬರ್ 2022, 9:49 IST
   

ಉದಯಪುರ: ಗಂಡ–ಹೆಂಡತಿ ಮತ್ತು ಅವರ ನಾಲ್ಕು ಮಕ್ಕಳು ನಿಗೂಢವಾಗಿಸಾವಿಗೀಡಾಗಿರುವ ಪ್ರಕರಣ ರಾಜಸ್ಥಾನದ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಜಡೋಲಿ ಹಳ್ಳಿಯ ನಿವಾಸಿ, ಕುಟುಂಬದ ಮುಖ್ಯಸ್ಥ ಪಪ್ಪು ಗಾಮೇಟಿ, ಮಕ್ಕಳು ಮತ್ತು ಹೆಂಡತಿಯನ್ನು ಕೊಂದು ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಪಪ್ಪು ಮತ್ತು ಆತನ ಮೂವರು ಮಕ್ಕಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಹೆಂಡತಿ ಮತ್ತು ಮತ್ತೊಂದು ಮಗುವಿನ ಶವ ಹಾಸಿಗೆ ಮೇಲೆ ಪತ್ತೆಯಾಗಿವೆ.

ADVERTISEMENT

ವಿಧಿ ವಿಜ್ಞಾನ ತಂಡ ಮತ್ತು ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.