ADVERTISEMENT

ಯೋಧನ ಅಂತ್ಯ ಸಂಸ್ಕಾರಕ್ಕೆ ಕೆಲವೇ ಗಂಟೆಗಳಿರುವಾಗ ಮಗುವಿಗೆ ಜನ್ಮ ನೀಡಿದ ಪತ್ನಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 14:22 IST
Last Updated 23 ಅಕ್ಟೋಬರ್ 2018, 14:22 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು:ಮಗುವಿಗಾಗಿ ಆ ದಂಪತಿ 10 ವರ್ಷ ಕಾದಿದ್ದರು.ಆದರೆ ವಿಧಿಯ ಲೀಲೆ ಬೇರೆಯೇ ಆಗಿತ್ತು.ಲಾನ್ಸ್ ನಾಯಕ್ ರಂಜೀತ್ ಸಿಂಗ್‍ ಎಂಬ ಯೋಧ ಭಾನುವಾರ ಹುತಾತ್ಮರಾಗಿದ್ದು ಇವರ ಅಂತ್ಯ ಸಂಸ್ಕಾರಕ್ಕೆ ಕೆಲವೇ ಗಂಟೆಗಳಿರುವಾಗ ಆತನ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ.

ಜಮ್ಮ ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಭಾನುವಾರ ಪಾಕಿಸ್ತಾನದ ನುಸುಳುಕೋರರ ಜತೆ ಕಾದಾಡುತ್ತಿರುವಾಗ ಸಿಂಗ್ ದೇಹಕ್ಕೆ ಗುಂಡು ತಾಗಿತ್ತು.ಮಂಗಳವಾರ ರಾಂಬಾನ್ ಜಿಲ್ಲೆಯಲ್ಲಿ ಸಿಂಗ್ ಅಂತ್ಯಕ್ರಿಯೆ ನಡೆದಿದ್ದು. ಅಂತ್ಯ ಸಂಸ್ಕಾರಕ್ಕೆ ಕೆಲವೇ ಗಂಟೆಗಳಿರುವಾಗ ಸಿಂಗ್ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

36ರ ಹರೆಯದ ಸಿಂಗ್ ಅವರ ಮೃತದೇಹ ಸೋಮವಾರ ಸುಲಿಗಂ ಗ್ರಾಮಕ್ಕೆ ತಲುಪಿತ್ತು. ಆದರೆ ಅಂತ್ಯ ಸಂಸ್ಕಾರವನ್ನು ಮಂಗಳವಾರ ಬೆಳಗ್ಗೆಯೇ ಮಾಡುವುದಾಗಿ ಕುಟುಂಬ ತೀರ್ಮಾನಿಸಿತ್ತು.ಸೋಮವಾರ ರಾತ್ರಿ ಯೋಧನಪತ್ನಿ ಶಿಮು ದೇವಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.ಅಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ಶಿಮು ದೇವಿ ಬೆಳಗ್ಗೆ 5 ಗಂಟೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ADVERTISEMENT

2003ರಲ್ಲಿ ಸೇನೆ ಸೇರಿದ್ದ ಸಿಂಗ್, ಪತ್ನಿಯ ಹೆರಿಗೆಗಾಗಿ ರಜೆ ತೆಗೆದುಕೊಳ್ಳಲು ತೀರ್ಮಾನಿಸಿದ್ದರು ಎಂದು ಸಿಂಗ್ ಅವರ ನೆರೆಮನೆಯ ವ್ಯಕ್ತಿ ವಿಜಯ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.