ADVERTISEMENT

‘ಜಾಲತಾಣದ ಬರಹ: ಬಂಧನ ಬೇಡ’: ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 19:18 IST
Last Updated 17 ಫೆಬ್ರುವರಿ 2019, 19:18 IST

ನವದೆಹಲಿ: ಸಾಮಾಜಿಕ ಜಾಲ ತಾಣಗಳಲ್ಲಿ ‘ಮನ ನೋಯಿಸುವ, ಕಿರಿ ಕಿರಿ ಉಂಟು ಮಾಡುವ ಅಥವಾ ಅವಹೇಳನಕಾರಿ’ ಬರಹಗಳನ್ನು ಪ್ರಕಟಿಸುವವರನ್ನು ಬಂಧಿಸದಂತೆ ಪೊಲೀಸ್‌ ಇಲಾಖೆ ಮತ್ತು ನ್ಯಾಯಾಲಯಗಳಿಗೆ ಜಾಗೃತಿ ಮೂಡಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸು‍ಪ್ರೀಂ ಕೋರ್ಟ್‌ ಸೂಚಿಸಿದೆ.

ಇಂತಹ ಬಂಧನಕ್ಕೆ ಅವಕಾಶ ಇದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ 66ಎ ಸೆಕ್ಷನ್‌ ಅನ್ನು ರದ್ದುಪಡಿಸಿರುವುದನ್ನು ಸುಪ್ರೀಂ ಕೋರ್ಟ್‌ ನೆನಪಿಸಿದೆ. ಈ ತೀರ್ಪಿನ ಪ್ರತಿ ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಕೊಡಬೇಕು ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ನ್ಯಾಯಮೂರ್ತಿಗಳಾದ ಆರ್‌.ಎಫ್‌. ನರಿಮನ್‌ ಮತ್ತು ಸಂಜಯ್‌ ಕಿಶನ್ ಕೌಲ್‌ ಅವರ ಪೀಠಕ್ಕೆ ಸಲಹೆ ನೀಡಿದರು. ಎಂಟು ವಾರಗಳಲ್ಲಿ ತೀರ್ಪಿನ ಪ್ರತಿ ಜಿಲ್ಲಾ ನ್ಯಾಯಾಲಯಗಳಿಗೆ ಸಿಗುವಂತೆ ಹೈಕೋರ್ಟ್‌ಗಳು ಮಾಡಬೇಕು ಎಂದು ಪೀಠ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT