ADVERTISEMENT

ರುಮಾಲು ಧರಿಸಿದ್ದಕ್ಕೆ ದಲಿತ ವ್ಯಕ್ತಿಯ ಮದುವೆ ಮೆರವಣಿಗೆ ಮೇಲೆ ಕಲ್ಲು ತೂರಾಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 14:49 IST
Last Updated 24 ಫೆಬ್ರುವರಿ 2021, 14:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಯಡ್‌ (ಗುಜರಾತ್‌)(ಪಿಟಿಐ): ಮದುವೆಯಲ್ಲಿ ಕೆಲ ಸಂಬಂಧಿಕರು ಸಾಂಪ್ರದಾಯಿಕ ರುಮಾಲು ಧರಿಸಿದ್ದರಿಂದ ಹಾಗೂ ಡಿಜೆ ಸಂಗೀತ ಬಳಸಿದ್ದರಿಂದ ಆಕ್ರೋಶಗೊಂಡ ಜನರ ಗುಂಪೊಂದು ದಲಿತ ವ್ಯಕ್ತಿಯ ಮದುವೆ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆಸಿದ ಘಟನೆ ಗುಜರಾತ್‌ನ ಅರವಲ್ಲಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

ಬಾಯಡ್‌ ನಗರದ ಲಿಂಚ್‌ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುವೆ ಮೆರವಣಿಗೆ ಗ್ರಾಮದೊಳಗೆ ಪ್ರವೇಶಿಸುತ್ತಿದ್ದಂತೆ ಗುಂಪು ಕಲ್ಲು ತೂರಾಟ ನಡೆಸಿದೆ. ವಧುವಿನ ಸಂಬಂಧಿಕರು ದೂರು ದಾಖಲಿಸಿದ್ದು, ಆರೋಪಕ್ಕೆ ಸಂಬಂಧಿಸಿದಂತೆ ರಜಪೂತ್‌ ಸಮುದಾಯದ ಒಂಬತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ದಲಿತ ಪುರುಷ ಹಾಗೂ ಮಹಿಳೆಯರು ಮೆರವಣಿಗೆಯಲ್ಲಿ ಹೋಗುವಾಗ ಸಾಂಪ್ರದಾಯಿಕ ರುಮಾಲು ’ಸಫ‘ ಧರಿಸಿದ್ದಕ್ಕೆ ಆರೋಪಿಗಳು ವಿರೋಧ ವ್ಯಕ್ತಪಡಿಸಿದರು. ಕಲ್ಲು ಬಿಸಾಡಿದಲ್ಲದೇ ಜಾತಿನಿಂದನೆಯನ್ನೂ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.