ADVERTISEMENT

ವೇಗವಾದ ಗಾಳಿಯಿಂದ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ: ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆ

ಪಿಟಿಐ
Published 27 ನವೆಂಬರ್ 2020, 9:20 IST
Last Updated 27 ನವೆಂಬರ್ 2020, 9:20 IST
ದೆಹಲಿ– ಸಾಂದರ್ಭಿಕ ಚಿತ್ರ
ದೆಹಲಿ– ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜ್ಯಧಾನಿ ದೆಹಲಿಯಲ್ಲಿ ಶುಕ್ರವಾರ ಮುಂಜಾನೆ ವೇಗವಾಗಿ ಗಾಳಿ ಬೀಸಿದ ಪರಿಣಾಮವಾಗಿ ಗಾಳಿಯ ಗುಣಮಟ್ಟ ಸುಧಾರಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಸಂಶೋಧನಾ ಕೇಂದ್ರ ತಿಳಿಸಿದೆ.

ಗುರುವಾರ ಸಂಜೆ 4 ಗಂಟೆಯ ವೇಳೆಗೆ 302ರಷ್ಟಿದ್ದ ಗಾಳಿ ಗುಣಮಟ್ಟ ಸೂಚ್ಯಂಕ (ಎಕ್ಯೂಐ), ಶುಕ್ರವಾರ ಬೆಳಿಗ್ಗೆ 9ರ ವೇಳೆಗೆ 131ಕ್ಕೆ ತಲುಪಿ, ಗುಣಮಟ್ಟ ತುಸು ಸುಧಾರಿಸಿದೆ. ಕಳೆದ ಬುಧವಾರ ಈ ಸೂಚ್ಯಂಕ 431ಕ್ಕೆ ಏರಿತ್ತು. ಇದು ಗಾಳಿ ಗುಣಮಟ್ಟ ತೀವ್ರ ಕಳಪೆಯಾಗಿರುವ ಸೂಚನೆ.

0 ಯಿಂದ 50ರ ನಡುವಿನ ಸೂಚ್ಯಂಕವನ್ನು ‘ಉತ್ತಮ‘ ಎಂದು, 51 ರಿಂದ 100 ನಡುವಿರುವ ಅಂಶವನ್ನು ‘ತೃಪ್ತಿದಾಯಕ‘ ಹಾಗೂ 201 –300 ನಡುವಿನ ‘ಕಳಪೆ‘ ಎಂದು 301 ರಿಂದ 400 ನಡುವಿನ ಸೂಚ್ಯಂಕವನ್ನು ‘ತುಂಬಾ ಕಳಪೆ‘ ಮತ್ತು 401ರಿಂದ 501ರ ನಡುವಿನ ಸೂಚ್ಯಂಕವನ್ನು ‘ತೀವ್ರ ಕಳಪೆ‘ ಎಂದು ಪರಿಗಣಿಸಲಾಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.