ಕೋಟಾ: ಧೂಮಪಾನಿ ಎಂದು ಪೋಷಕರು ಶಂಕಿಸಿದಕ್ಕೆ ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಕೋಟಾದಲ್ಲಿ ಜರುಗಿದೆ.
ಕೋಟಾದ ಖಾಸಗಿ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದ ಅಥರ್ವ ಸಕ್ಸೇನಾ(18) ಅವರು ಶುಕ್ರವಾರ ಬಾಡಿಗೆ ಮನೆಯಲ್ಲಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ನನ್ನ ಸಾವಿಗೆ ಯಾರೂ ಕೂಡ ಕಾರಣವಲ್ಲ. ನೀವು ಶಂಕಿಸಿದಂತೆ ನಾನು ಯಾವತ್ತೂ ಧೂಮಪಾನ ಮಾಡಿರಲಿಲ್ಲ’ ಎಂದು ಮರಣಪತ್ರದಲ್ಲಿ ಬರೆದಿದ್ದಾರೆ.
ಪೋಷಕರು ಮಗನು ಧೂಮಪಾನ ಚಟಕ್ಕೆ ಒಳಗಾಗಿದ್ದಾನೆ ಎಂದು ಸತತವಾಗಿ ಶಂಕಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.